ಮುಂಬೈ: ಬಾಲಿವುಡ್ ನಟ ಗೋವಿಂದ ಏಕನಾಥ್ ಶಿಂಧೆ ಬಣದ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ. ನಾನು ಶಿವಸೇನೆಗೆ ಸೇರುತ್ತಿದ್ದೇನೆ. ಇದು ದೇವರ ಆಶೀರ್ವಾದವಾಗಿದೆ. ನಾನು ಮತ್ತೆ ರಾಜಕೀಯಕ್ಕೆ ಬರುವುದಿಲ್ಲ ಎಂದು ನಾನು ಭಾವಿಸಿದ್ದೆ ಎಂದು ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ನಟ ಹೇಳಿದರು.
ಲೋಕಸಭೆ ಚುನಾವಣೆಗೆ ಅವರು ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ಏಕನಾಥ್ ಶಿಂಧೆ ನೇತೃತ್ವದಲ್ಲಿ ಮುಂಬೈ ನಗರವು ಈಗ ಸ್ವಚ್ಛವಾಗಿ ಮತ್ತು ಉತ್ತಮವಾಗಿ ಕಾಣುತ್ತದೆ ಎಂದು ಗೋವಿಂದ ಶಿಂಧೆಯನ್ನು ಹೊಗಳಿದ್ದಾರೆ.
ಗೋವಿಂದ 2004 ರಲ್ಲಿ ಮುಂಬೈ ಉತ್ತರ ಲೋಕಸಭೆಯಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಬಿಜೆಪಿಯ ರಾಮ್ ನಾಯಕ್ ಅವರನ್ನು ಸೋಲಿಸಿದ್ದರು. ನಂತರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ದೂರ ಇದ್ದರು.
ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ನಟ ಗೋವಿಂದ ಪೋಷಕರು ಹೇಳಿದ್ದಾರೆ.