ಬೊಲಿವಿಯಾದಲ್ಲಿ ವಿದ್ಯಾರ್ಥಿಗಳ ಘರ್ಷಣೆ ಮಧ್ಯೆ ಸರಳು ಗೋಡೆ ಕುಸಿತ : ನಾಲ್ಕನೇ ಅಂತಸ್ತಿನಿಂದ ಬಿದ್ದು 7 ವಿದ್ಯಾರ್ಥಿಗಳ ಮೃತ್ಯು !

Prasthutha|

► ಘಟನೆಯ ದೃಶ್ಯ ವೀಡಿಯೋದಲ್ಲಿ ಸೆರೆ

ಲಾಲ್ ಪಝಾ : ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಎರಡು ಬಣಗಳ ನಡುವೆ ಬಾಲ್ಕನಿಯಲ್ಲಿ  ಘರ್ಷಣೆ ಏರ್ಪಟ್ಟಿದ್ದು, ಆ ವೇಳೆ ಅಲ್ಲಿ ಹಾಕಿದ್ದ ಕಬ್ಬಿಣದ ಕಂಬಿ ತಡೆಗೋಡೆ ಕುಸಿದಿದೆ. ನಾಲ್ಕನೇ ಅಂತಸ್ತಿನಿಂದ ಕೆಳಗೆ ಬಿದ್ದು ಏಳು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಐವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಬೊಲಿವಿಯಾದ ಎರಡನೇ ಅತಿ ದೊಡ್ಡ ನಗರವಾಗಿರುವ ಎಲ್ ಆಲ್ಟೋ ನಗರದ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳ ನಡುವೆ ನೂಕಾಟ ತಳ್ಳಾಟ ಏರ್ಪಟ್ಟಿತ್ತು. ಈ ವೇಳೆ ಬಾಲ್ಕನಿಯಲ್ಲಿ ಹಾಕಲಾಗಿದ್ದ ತಡೆ ಗೋಡೆ ಕುಸಿದಿದೆ.

- Advertisement -

ಘಟನೆಯ ವೇಳೆ ಸ್ಥಳದಲ್ಲೇ ಇದ್ದವರು  ವೀಡಿಯೋ ಮಾಡಿದ್ದು, ಅದರಲ್ಲಿ ವಿದ್ಯಾರ್ಥಿಗಳು ಕೆಳಗೆ ಬೀಳುವ ದೃಶ್ಯಗಳು ಸೆರೆಯಾಗಿದೆ. ಒಬ್ಬಳು ವಿದ್ಯಾರ್ಥಿನಿಯನ್ನು ಆಕೆಯ ಶೂವನ್ನು ಯಾರೋ ಹಿಡೀದುಕೊಂಡು ರಕ್ಷಿಸುವ ದೃಶ್ಯ ಕೂಡಾ ಅದರಲ್ಲಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಎಲ್ ಆಲ್ಟೊ ನಗರದ ಜನತೆಗೆ ನಾವು ನಮ್ಮ ಶೋಕವನ್ನು ತಿಳಿಸುತ್ತಿದ್ದೇವೆ ಎಂದು ಅಧ್ಯಕ್ಷ ಲೂಯಿಸ್ ಆರ್ಸೆ ಹೇಳಿದ್ದಾರೆ. ಮೃತಪಟ್ಟವರೆಲ್ಲರೂ 20 ರಿಂದ 24 ರ ಹರೆಯದ ವಿದ್ಯಾರ್ಥಿಗಳಾಗಿದ್ದಾರೆ.

- Advertisement -