Home ಮಾಹಿತಿ 17,000 ಮಂದಿಯನ್ನು ಕೆಲಸದಿಂದ ತೆಗೆಯುತ್ತಿರುವ ಬೋಯಿಂಗ್

17,000 ಮಂದಿಯನ್ನು ಕೆಲಸದಿಂದ ತೆಗೆಯುತ್ತಿರುವ ಬೋಯಿಂಗ್

ವರ್ಜಿನಿಯಾ: ಅಮೆರಿಕ ಮೂಲದ ವಿಮಾನ ತಯಾರಕ ಸಂಸ್ಥೆಯಾದ ಬೋಯಿಂಗ್ ತನ್ನ ಶೇ. 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿದೆ.

17,000 ಮಂದಿಯ ಲೇ ಆಫ್ ಮಾಡುವ ನಿರ್ಧಾರವನ್ನು ಬೋಯಿಂಗ್ ಸಂಸ್ಥೆ ಪ್ರಕಟಿಸಿದೆ.

ಮೊನ್ನೆ ಬುಧವಾರದಿಂದಲೇ ಉದ್ಯೋಗಿಗಳಿಗೆ ಲೇ ಆಫ್ ನೋಟೀಸ್ (ಪಿಂಕ್ ಸ್ಲಿಪ್) ಕಳುಹಿಸಲು ಆರಂಭಿಸಿದೆ ಎಂದು ಬ್ಲೂಮ್​ಬರ್ಗ್ ಏಜೆನ್ಸಿಯ ವರದಿ ತಿಳಿಸಿದೆ.

ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಕ್ಷಮತೆ ಹೆಚ್ಚಿಸಲು ಮತ್ತು ಉತ್ಪನ್ನಶೀಲತೆ ಹೆಚ್ಚಿಸಲು ಬೋಯಿಂಗ್ ಈ ಕ್ರಮ ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ.

ವಾಷಿಂಗ್ಟನ್​ನ ಸಿಯಾಟಲ್​ನಲ್ಲಿ ಬೋಯಿಂಗ್​ನ ಅತಿದೊಡ್ಡ ಫ್ಯಾಕ್ಟರಿ ಇದೆ. ಸಿಯಾಟಲ್ ನಗರದಲ್ಲಿ ನಿರುದ್ಯೋಗ ಪ್ರಮಾಣ ಕೇವಲ ಶೇ. 4 ಮಾತ್ರವೇ ಇದೆ. ಈ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಲೇ ಆಫ್ ಮಾಡುತ್ತಿರುವುದು ಬೋಯಿಂಗ್ ಕಂಪನಿಗೆ ರಿಸ್ಕಿ ಎನಿಸಬಹುದು. ಭವಿಷ್ಯದಲ್ಲಿ ಅಗತ್ಯಬೀಳುವ ಕೆಲಸಗಳಿಗೆ ಉದ್ಯೋಗಿಗಳನ್ನು ಆಕರ್ಷಿಸಲು ಕಷ್ಟವಾಗಬಹುದು ಎನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ.

ವಿಶ್ವದ ಅತಿದೊಡ್ಡ ವಿಮಾನ ಸಂಸ್ಥೆ ಎನಿಸಿದ ಬೋಯಿಂಗ್ ಸಂಸ್ಥೆ ಇತ್ತೀಚಿನ ವರ್ಷಗಳಲ್ಲಿ ಕೆಲ ಸಂಕಷ್ಟಗಳಿಗೆ ಸಿಲುಕಿದೆ. ಅದರ ಕೆಲ ವಿಮಾನಗಳು ವಿವಿಧೆಡೆ ಅಪಘಾತಗೊಂಡಿವೆ. ವಿಮಾನದ ಕೆಲ ಸಾಫ್ಟ್​ವೇರ್ ಮತ್ತು ಹಾರ್ಡ್​ವೇರ್​ಗಳಲ್ಲಿನ ದೋಷ ಇದಕ್ಕೆ ಕಾರಣ ಎನ್ನಲಾಗಿದೆ. ಇದರ ಜೊತೆಗೆ, 2018ರಿಂದಲೂ ಅದು ಲಾಭವನ್ನೇ ಕಂಡಿಲ್ಲ.

Join Whatsapp
Exit mobile version