Home ಟಾಪ್ ಸುದ್ದಿಗಳು ನ್ಯಾಯಾಲಯದ ಆವರಣದಲ್ಲೇ ವಕೀಲರ ಸಂಘದ ನೌಕರನ ಶವ ಪತ್ತೆ

ನ್ಯಾಯಾಲಯದ ಆವರಣದಲ್ಲೇ ವಕೀಲರ ಸಂಘದ ನೌಕರನ ಶವ ಪತ್ತೆ

►ಕೊಲೆ ಶಂಕೆ ವ್ಯಕ್ತಪಡಿಸಿದ ದೆಹಲಿ ಪೊಲೀಸರು

ಹೊಸದಿಲ್ಲಿ: ದೆಹಲಿಯ ತೀಸ್ ಹಝಾರಿ ನ್ಯಾಯಾಲಯದ ಕೊಠಡಿಯಲ್ಲಿ ಬಾರ್ ಅಸೋಸಿಯೇಷನ್ ಉದ್ಯೋಗಿಯ ಮೃತದೇಹ ಪತ್ತೆಯಾಗಿದೆ.

ಮನೋಜ್ (35) ಮೃತ ದುರ್ದೈವಿ. ಮೃತದೇಹದ ಮೈಮೇಲೆ ಗಾಯಗಳು ಪತ್ತೆಯಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈತ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಬಾರ್ ಅಸೋಸಿಯೇಷನ್ ಹಂಗಾಮಿ ನೌಕರ ಮನೋಜ್ ರಾತ್ರಿ ಚೇಂಬರ್ ನಲ್ಲೇ ತಂಗುತ್ತಾರೆ. ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಆಗಮಿಸಿದ ಇತರ ಉದ್ಯೋಗಿಗಳು ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರವೇ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version