ಚೆನ್ನೈ: ಭಯಾನಕ ಘಟನೆಯೊಂದು ತಮಿಳುನಾಡಿನ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಕುಡಿಯುವ ನೀರಿನ ಕೆರೆಯಲ್ಲಿ ತಲೆ ಮತ್ತು ಕೈಕಾಲುಗಳಿಲ್ಲದ ಶವ ಪತ್ತೆಯಾಗಿದ್ದು, ಜನರನ್ನು ತಲ್ಲಣಗೊಳಿಸಿದೆ. ಶವದ ಹೊಟ್ಟೆಯಲ್ಲಿ ಇರಿತದ ಗಾಯವಿದೆ.
ಮೀನುಗಾರರ ಗುಂಪು ಚೆನ್ನೈನ ಚೆಂಬರಂಬಕ್ಕ ಸರೋವರದಿಂದ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಬಳಿಕ ತೀವ್ರ ಹುಡುಕಾಟ ನಡೆಸಿದಾಗ ದೇಹದ ಕಾಲು ಸಹ ಪತ್ತೆಯಾಗಿದೆ.
ಸಾವನ್ನಪ್ಪಿದ ವ್ಯಕ್ತಿಗೆ ಸುಮಾರು 30 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಉದ್ದೇಶಪೂರ್ವಕವಾಗಿ ಕೊಲೆ ಮಾಡಿ ಕೈಕಾಲು , ತಲೆ ಕತ್ತರಿಸಿ ಬಂಡೆಗೆ ಕಟ್ಟಿ ಕೆರೆಗೆ ಎಸೆಯಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.