Home ಟಾಪ್ ಸುದ್ದಿಗಳು ಕಾರಿನೊಳಗೆ ಟ್ಯಾಕ್ಸಿ ಚಾಲಕ ಹಾಗೂ ಮಹಿಳೆಯ ಶವ ಪತ್ತೆ

ಕಾರಿನೊಳಗೆ ಟ್ಯಾಕ್ಸಿ ಚಾಲಕ ಹಾಗೂ ಮಹಿಳೆಯ ಶವ ಪತ್ತೆ

ಡೆಹ್ರಾಡೂನ್: ಕಾರಿನೊಳಗೆ ಟ್ಯಾಕ್ಸಿ ಚಾಲಕ ಹಾಗೂ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ಡೆಹ್ರಾಡೂನ್ ನ ರಾಜ್ ಪುರ ಪ್ರದೇಶದಲ್ಲಿ ನಡೆದಿದೆ.


ಮೃತರನ್ನು 50 ವರ್ಷದ ರಾಜೇಶ್ ಸಾಹು, 45 ವರ್ಷದ ಮಹೇಶ್ವರಿ ಎಂದು ಗುರುತಿಸಲಾಗಿದೆ.


ಕಾರಿನೊಳಗಿದ್ದ ಗ್ಯಾಸ್ ಹಾಗೂ ಎಸಿಯ ಟೆಂಪರೇಚರ್ ನಿಂದ ಇಬ್ಬರೂ ಸಾವನ್ನಪ್ಪಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಹಸ್ತ್ರಧಾರಾ ಹೆಲಿಪ್ಯಾಡ್ ಹಿಂಭಾಗದ ನಾಗಲ್ ವಾಲಿ ರಸ್ತೆಯಲ್ಲಿ ಕಾರೊಂದು ನಿಂತಿರುವ ಬಗ್ಗೆ ನಿಯಂತ್ರಣ ಕೊಠಡಿಯಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮತ್ತು ಅದರೊಳಗೆ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಇಬ್ಬರೂ ಅಲ್ಲಿ ಮದ್ಯ ಸೇವಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಎರಡೂ ಶವಗಳನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Join Whatsapp
Exit mobile version