April 8, 2021
ತರಬೇತಿ ನಿರತ 96 ಸಾರಿಗೆ ನೌಕರರನ್ನು ವಜಾ ಮಾಡಿದ BMTC

ಬೆಂಗಳೂರು: ತರಬೇತಿ ನಿರತ 96 ಸಾರಿಗೆ ನೌಕರರನ್ನು ವಜಾ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ತರಬೇತಿ ನೌಕರರನ್ನ ಮಾತ್ರ ವಜಾ ಮಾಡಲಾಗಿದೆ. ರಜೆಗೆ ಕಾರಣ ನೀಡಿ ಇಂದೇ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ನೋಟಿಸ್ ನೀಡಿತ್ತು. ನೋಟಿಸ್ ನೀಡಿದ್ದರೂ ಹಾಜರಾಗದ ನೌಕರರನ್ನ ವಜಾ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ವೇತನ ಹೆಚ್ಚಳಕ್ಕೆ ಒತ್ತಾಯಿಸಿ, ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರು ಪ್ರತಿಭಟನೆ ಮುಂದುವರೆಸಿದ್ದು, ನೌಕರರು ಕೆಲಸಕ್ಕೆ ಹಾಜರಾಗದಿದ್ರೆ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ಎಚ್ಚರಿಸಿದ್ದರು.

