Home ಟಾಪ್ ಸುದ್ದಿಗಳು ಬಿಎಂಟಿಸಿ ಬಸ್ ಅವಾಂತರಕ್ಕೆ ನಾಗರಿಕ ಮೃತ್ಯು, ಬಡ ಕಾರ್ಮಿಕನ ಕುಟುಂಬಕ್ಕೆ ಸರಕಾರ ಶೀಘ್ರ ಪರಿಹಾರ ನೀಡಲಿ...

ಬಿಎಂಟಿಸಿ ಬಸ್ ಅವಾಂತರಕ್ಕೆ ನಾಗರಿಕ ಮೃತ್ಯು, ಬಡ ಕಾರ್ಮಿಕನ ಕುಟುಂಬಕ್ಕೆ ಸರಕಾರ ಶೀಘ್ರ ಪರಿಹಾರ ನೀಡಲಿ : SDTU

ಬೆಂಗಳೂರು: ನಾಗವಾರ ಯಲಹಂಕ ಮಾರ್ಗದಲ್ಲಿ ಟ್ರಾಫಿಕ್ ವಾರ್ಡನ್ ಸಿಗ್ನಲ್ ಸೂಚನೆ ಮೇರೆಗೆ ನಿಂತಿದ್ದ ಬೈಕ್, ಕಾರು ಇತರ ವಾಹನಗಳ ಮೇಲೆ ಬಿಎಂಟಿಸಿ ಬಸ್ ಬಂದೆರಗಿದ ಕಾರಣದಿಂದ ಓರ್ವ ಮೃತಪಟ್ಟು ಹಲವು ಮಂದಿ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಈ ದುರ್ಘಟನೆಗೆ ಕಾರಣವಾದ ಅಂಶಗಳನ್ನು ತನಿಖೆ ನಡೆಸಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 50 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 10 ಲಕ್ಷ ಪರಿಹಾರ ನೀಡಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಬೆಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಅಝರ್ ಬೆಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಬಿಎಂಟಿಸಿ ಬಸ್ ಅವಾಂತರಕ್ಕೆ ಈಗಾಗಲೇ ಹಲವು ಜೀವ ಬಲಿಯಾಗಿದ್ದು ಚಾಲಕರ ನಿರ್ಲಕ್ಷತನ ದಿಂದ ಹಲವು ಮಂದಿ ಗಾಯಗೊಂಡಿದ್ದಾರೆ.
ಈ ದುರ್ಘಟನೆಗೆ ಬಸ್ ಚಾಲಕ ಬ್ರೇಕ್ ಫೇಲ್ ಆಗಿದೆ ಎಂಬ ಸಬೂಬು ನೀಡುವಾಗ ಇದರ ಹೊಣೆ ಬಿಎಂಟಿಸಿ ಬಸ್ಸಿನ ತಾಂತ್ರಿಕವಾಗಿ ನಿರ್ವಹಿಸುವ ಅಧಿಕೃತರನ್ನು ಹೊಣೆಯಾಗಿಸ ಬೇಕೆಂದು SDTU ಆಗ್ರಹಿಸಿದೆ.

ಮಾತ್ರವಲ್ಲ ಭವಿಷ್ಯದಲ್ಲಿ ಬಸ್ಸಿನ ತಾಂತ್ರಿಕ ಕೆಲಸಗಳನ್ನು ಸಮರ್ಪಕ ನಿರ್ವಹಿಸಲು ಸಾರಿಗೆ ಇಲಾಖೆ ಸೂಕ್ತವಾಗಿ ಅಧಿಕೃತರನ್ನು ನಿರ್ಬಂಧಿಸಬೇಕು, ಬಿಎಂಟಿಸಿ ಬಸ್ಸಿನ ಕೆಲವು ಚಾಲಕರ ಅಜಾಗೂರತೆಯ ಚಾಲನೆಗೆ ಕಡಿವಾಣ ಹಾಕಬೇಕು, ಈವರೆಗೆ ನಡೆದ ಅಪಘಾತಕ್ಕೆ ಕಾರಣಗಳನ್ನು ತನಿಖೆ ನಡೆಸಲು ವಿಶೇಷ ಸಮಿತಿ ರಚಿಸ ಬೇಕು, ಜನರ ಜೀವಕ್ಕೆ ಇಲಾಖೆ ಬೆಲೆ ನೀಡಬೇಕು ಎಂದು SDTU ಒತ್ತಾಯಿಸುತ್ತದೆ

Join Whatsapp
Exit mobile version