Home ಕರಾವಳಿ ಎಸ್’ಡಿಪಿಐ ಅಡ್ಯಾರು ಅರ್ಕುಳ ಗ್ರಾಮ ಸಮಿತಿಯಿಂದ ರಕ್ತದಾನ ಶಿಬಿರ

ಎಸ್’ಡಿಪಿಐ ಅಡ್ಯಾರು ಅರ್ಕುಳ ಗ್ರಾಮ ಸಮಿತಿಯಿಂದ ರಕ್ತದಾನ ಶಿಬಿರ

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಹಾಗೂ ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಜ್ಯೋತಿ ಇದರ ಸಹಭಾಗಿತ್ವದಲ್ಲಿ ರಕ್ತ ಕೊಟ್ಟು ಬಾಂಧವ್ಯ ಕಟ್ಟು ರಕ್ತದಾನ ಮಾಸಾಚರಣೆ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವು ಆದಿತ್ಯವಾರ ವಲಚ್ಚಿಲ್ ಪದವು ನವಜ್ಯೋತಿ ಸಮುದಾಯ ಭವನದಲ್ಲಿ ನಡೆಯಿತು.


ಎಸ್’ಡಿಪಿಐ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಅಧ್ಯಕ್ಷ ರಶೀದ್ ಅರ್ಕುಳ ಅಧ್ಯಕ್ಷತೆ ವಹಿಸಿದ್ದರು.
ವಲಚ್ಚಿಲ್ ಪದವು ಜುಮಾ ಮಸೀದಿ ಮುಅಲ್ಲಿಮ್ ಅಶ್ರಫ್ ಮದನಿ ದುಅ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್’ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮತ್ತು ಎಸ್’ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಯಾಸೀನ್ ಅರ್ಕುಳ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಕೆ.ಎಂ.ಸಿ ಆಸ್ಪತ್ರೆಯ ಬ್ಲಡ್ ಇಂಚಾರ್ಜ್ ವಸುಂದರಾ ರಾಜ್ ರವರು ರಕ್ತದ ಮಹತ್ವದ ಬಗ್ಗೆ ತಿಳಿಸಿದರು.
110 ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು. ಸಲೀಂ ವಲಚ್ಚಿಲ್ ಕಾರ್ಯಕ್ರಮವನ್ನು ನಿರೂಪಿಸಿ ಕೊನೆಗೆ ಧನ್ಯವಾದವನ್ನು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್’ಡಿಪಿಐ ಅಡ್ಯಾರ್ ಬ್ಲಾಕ್ ಅಧ್ಯಕ್ಷ ಮುಹಮ್ಮದ್ ಕಲ್ಲಾಪು, ಅರ್ಕುಳ ಗ್ರಾಮ ಪಂಚಾಯತ್ ಸದಸ್ಯರಾದ ಉಬ್ಯೆದುಲ್ಲಾ, ಶಬೀರ್, ಆಸೀಫ್ ವಲಚ್ಚಿಲ್, ಮಜೀದ್ ವಲಚ್ಚಿಲ್, ಹಮೀದ್ ಅಡ್ಯಾರ್, ಸುನಿಯತ್ ವಲಚ್ಚಿಲ್, ಮಾಜಿ ಪಂಚಾಯತ್ ಸದಸ್ಯ ಅಬ್ಬಾಸ್, ನವಜ್ಯೋತಿ ಸಮುದಾಯ ಭವನದ ಅಧ್ಯಕ್ಷ ರಾಜೇಶ್ ನೆಲ್ಸನ್ ಡಿಸೋಜ, ಟ್ರಿನಿಟಿ ಮೆಡಿಕಲ್ ಮಂಗಳೂರು ಇದರ ಮಾಲಕ ಪ್ರವೀಣ್ ಡಿಸೋಜ ಹಾಗೂ ಮಸಲ್ ಹಂಟ್ ಜಿಮ್ಮು ಇದರ ಮಾಲಕರು ನವೀನ್ ಡಿಸೋಜ ಉಪಸ್ಥಿತರಿದ್ದರು.

Join Whatsapp
Exit mobile version