Home ಕರಾವಳಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಳ್ಳಾಲ ವತಿಯಿಂದ ಡಿ.26 ಕ್ಕೆ ರಕ್ತದಾನ ಶಿಬಿರ

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಳ್ಳಾಲ ವತಿಯಿಂದ ಡಿ.26 ಕ್ಕೆ ರಕ್ತದಾನ ಶಿಬಿರ

ಉಳ್ಳಾಲ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಳ್ಳಾಲ ಮತ್ತು ಯೇನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಇದರ ಸಂಯೋಗದೊಂದಿಗೆ ಡಿಸೆಂಬರ್ 26 ರಂದು ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ವತಿಯಿಂದ ನಡೆಯುವ ಈ ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆಯಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ರಕ್ತದಾನಿಗಳು ಆಗಮಿಸಿ ಈ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದು ಫಾರಂ ನ ಉಪಾಧ್ಯಕ್ಷ ಅಲ್ತಾಫ್ ಉಳ್ಳಾಲ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Join Whatsapp
Exit mobile version