Home ಗಲ್ಫ್ ದುಬೈ | ಕೆಎಸ್ ಸಿಸಿ ವತಿಯಿಂದ ರಕ್ತದಾನ ಶಿಬಿರ

ದುಬೈ | ಕೆಎಸ್ ಸಿಸಿ ವತಿಯಿಂದ ರಕ್ತದಾನ ಶಿಬಿರ

ದುಬೈ: ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ ವಿಶ್ವ ರಕ್ತದಾನಿಗಳ ದಿನವನ್ನು ದುಬೈ ಹೆಲ್ತ್ ಅಥಾರಿಟಿ (ಡಿಎಚ್ ಎ) ಮತ್ತು ಸಮುದಾಯ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ) ಸಹಯೋಗದೊಂದಿಗೆ ಜುಲೈ 2 ರಂದು ದುಬೈಯ ಲತಿಫಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.


ಶಿಬಿರದಲ್ಲಿ ಸುಮಾರು 171 ಜನರು ಭಾಗವಹಿಸಿ ರಕ್ತದಾನ ಮಾಡಿದರು. ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಕೆಎಸ್ ಸಿಸಿ ರಕ್ತದಾನವನ್ನು ಮುಂದುವರೆಸಲು ಮತ್ತು ದುಬೈ ಆರೋಗ್ಯ ಪ್ರಾಧಿಕಾರ ಮತ್ತು ದುಬೈ ಸರ್ಕಾರಕ್ಕೆ ಬೆಂಬಲ ನೀಡುವುದಕ್ಕಾಗಿ ಈ ಉಪಕ್ರಮವನ್ನು ಕೈಗೊಂಡಿತ್ತು. ರಕ್ತದಾನದ ಸಂದರ್ಭದಲ್ಲಿ ಕೆಎಸ್‌ಸಿಸಿ ಕ್ಲಬ್ ವ್ಯವಸ್ಥಾಪಕ ಮುಹಮ್ಮದ್ ಶಫಿ ಉಪಸ್ಥಿತರಿದ್ದರು.


ನಿಮ್ಮ ರಕ್ತವನ್ನು ನಮಗೆ ಕೊಟ್ಟ ಕಾರಣ, ತುರ್ತು ಅಗತ್ಯವಿದ್ದವರಿಗೆ ಜೀವವನ್ನು ರಕ್ಷಿಸುವಲ್ಲಿ ಸಹಾಯ ಮಾಡಲು ಸಾಧ್ಯವಾಗಲಿದೆ ಎಂದು ಕರ್ನಾಟಕ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಎಲ್ಲಾ ರಕ್ತ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿತು.

Join Whatsapp
Exit mobile version