ಜಮ್ಮು ಕಾಶ್ಮೀರದಲ್ಲಿ ಹಿಮಪಾತ: ಮಗು ಸೇರಿ 30 ಮಂದಿಯ ರಕ್ಷಣೆ

Prasthutha|

ಶ್ರೀನಗರ :  ಚಲಿಸುತ್ತಿದ್ದ ವಾಹನದ ಮೇಲೆ ಹಿಮಪಾತವಾದ ಘಟನೆ ಮಂಗಳವಾರ  ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗಧಾರ್-ಚೌಕಿಬಾಲ್ ಆಕ್ಸಿಸ್ ಬಳಿ ನಡೆದಿದೆ.

- Advertisement -

ಖೂನಿ ನಾಲಾ ಮತ್ತು ಎಸ್‍ಎಂ ಹಿಮಪರ್ವತದ ಹತ್ತಿರವಿರುವ ಎನ್‍ಎಚ್ 701 ರಸ್ತೆಯಲ್ಲಿ ವಾಹನವು ಚಲಿಸುತ್ತಿದ್ದ ಸಂದರ್ಭದಲ್ಲಿ ಹಿಮಪಾತವಾಗಿ ನಾಗರಿಕರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಅದರಲ್ಲಿ ಸಿಲುಕಿಕೊಂಡಿದ್ದ ಮಗು ಸೇರಿ 30 ಮಂದಿಯನ್ನು ಸತತ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಭಾರತೀಯ ಸೇನೆ ಯೋಧರು ರಕ್ಷಿಸಿದ್ದಾರೆ.

ಭಾರತೀಯ ಯೋಧರು ಹಿಮಪಾತದಲ್ಲಿ ಸಿಲುಕಿರುವ 30 ಮಂದಿಯನ್ನು ರಕ್ಷಿಸಿ 14 ಜನರನ್ನು ನಿಲಂಗೆ ಮತ್ತು ಇನ್ನೂ 16 ಜನರನ್ನು ನಗರದ ಎಸ್‍ಸಿ ಪಾಸ್‍ಗೆ ಸ್ಥಳಾಂತರಿಸಲಾಗಿದೆ. ರಕ್ಷಿಸಲ್ಪಟ್ಟ ನಾಗರಿಕರಿಗೆ ರಾತ್ರಿ ಆಹಾರ, ವೈದ್ಯಕೀಯ ಸೌಲಭ್ಯಗಳನ್ನು ಸಹ ನೀಡಿದ್ದೇವೆ ಎಂದು ಹೇಳಿದ್ದಾರೆ.ಅದೇ ರಸ್ತೆಯ ಇನ್ನೊಂದು ಭಾಗದಲ್ಲಿ 16 ಜನರ ಮತ್ತೊಂದು ಗುಂಪು ಸಿಲುಕಿಕೊಂಡಿದ್ದು, ಅವರನ್ನೂ ಸಹ ರಕ್ಷಿಸುವ ಭರವಸೆ ನೀಡಿದ್ದಾರೆ.



Join Whatsapp