Home ಟಾಪ್ ಸುದ್ದಿಗಳು ಅಂಧರ ಸ್ನೇಹ ಸರಣಿ: ಪಾಕಿಸ್ತಾನ ವಿರುದ್ಧ ಭಾರತ ಜಯ

ಅಂಧರ ಸ್ನೇಹ ಸರಣಿ: ಪಾಕಿಸ್ತಾನ ವಿರುದ್ಧ ಭಾರತ ಜಯ

ದುಬೈ:: ಭಾರತ ತಂಡವು ಅಂಧರ ಸ್ನೇಹ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು 46 ರನ್ನುಗಳಿಂದ ಸೋಲಿಸಿದೆ.

ರಮೇಶ್‌ ಅವರ 87 ಮತ್ತು ರಾವ್‌ ಅವರ 56 ರನ್‌ ನೆರವಿನಿಂದ ಭಾರತ ತಂಡವು ಮೂರು ವಿಕೆಟಿಗೆ 224 ರನ್ನುಗಳ ಉತ್ತಮ ಮೊತ್ತ ಕಲೆಹಾಕಿತ್ತು. ಮೊದಲ ವಿಕೆಟಿಗೆ 121 ರನ್ನುಗಳ ಜತೆಯಾಟ ನಡೆಸಿದ್ದರು.

ಇದಕ್ಕುತ್ತರವಾಗಿ ಪಾಕಿಸ್ತಾನ ತಂಡಕ್ಕೆ ಆರು ವಿಕೆಟಿಗೆ 178 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಭಾರತ ತಂಡದ ಎದು 46 ರನ್ನುಗಳಿಂದ ಸೋತಿತು. ಭಾರತ ತಂಡದ ಈ ಗೆಲುವಿನಿಂದಾಗಿ ಈ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ. ಸರಣಿಯ ಫೈನಲ್ ಪಂದ್ಯ ರವಿವಾರ ನಡೆಯಲಿದೆ.

Join Whatsapp
Exit mobile version