ಅಂಧರ ಕ್ರಿಕೆಟ್‌: ಶ್ರೀಲಂಕಾವನ್ನು 134 ರನ್‌ಗಳಿಂದ ಸೋಲಿಸಿದ ಭಾರತ

Prasthutha|

ನವದೆಹಲಿ: ಭಾರತ ಪುರುಷ ಅಂಧರ ಕ್ರಿಕೆಟ್ ತಂಡ ಸಮರ್ಥ್ ಚಾಂಪಿಯನ್‌ಷಿಪ್‌ನ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾವನ್ನು 134 ರನ್‌ಗಳಿಂದ ಸೋಲಿಸಿದೆ. ಅಜಯ್‌ ಕುಮಾರ್ ರೆಡ್ಡಿ ಮತ್ತು ನಕುಲ ಬದ್ನಾಯಕ್ ಅವರ ಅರ್ಧ ಶತಕಗಳ ನೆರವಿನಿಂದ ಈ ವಿಜಯ ಸಾಧ್ಯವಾಗಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ಭಾರತ ಪಡೆಯಿತು.

- Advertisement -

ಕರ್ನೈಲ್ ಸಿಂಗ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗೆ 273 ರನ್ ಗಳಿಸಿತು. ಹೊಸದಾಗಿ ತಂಡಕ್ಕೆ ಸೇರ್ಪಡೆಯಾದ ಆರಂಭ ಆಟಗಾರ ಗುಡದಪ್ಪ (ಬಿ1) 48 ರನ್ (27 ಎಸೆತ) ಗಳಿಸಿದರು. ರೆಡ್ಡಿ 26 ಎಸೆತಗಳಲ್ಲಿ 84 ರನ್ ಗಳಿಸಿದರೆ, ಬದ್ನಾಯಕ್ 46 ಎಸೆತಗಳಲ್ಲಿ 65 ರನ್ ಗಳಿಸಿದರು. ಬದ್ನಾಯಕ್ ಮತ್ತು ರೆಡ್ಡಿ 128 ರನ್‌ ಜೊತೆಯಾಟವಾಡಿದರು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 4 ವಿಕೆಟ್ ನಷ್ಟಕ್ಕೆ ಕೇವಲ 139 ರನ್ ಗಳಿಸಲಷ್ಟೇ ಗಳಿಸಿತು.

ಮೂರನೇ ಪಂದ್ಯ ಇದೇ ಕ್ರೀಡಾಂಗಣದಲ್ಲಿ ಇಂದು ಬುಧವಾರ ನಡೆಯಲಿದೆ.



Join Whatsapp