Home ಕರಾವಳಿ ಮಂಗಳೂರು SEZ ಒಳಗಿನ ಕ್ಯಾಟಸಿಂತ್ ಕೆಮಿಕಲ್ಸ್ ಕಂಪನಿಯಲ್ಲಿ ಸಿಲಿಂಡರ್ ಸ್ಪೋಟ !

ಮಂಗಳೂರು SEZ ಒಳಗಿನ ಕ್ಯಾಟಸಿಂತ್ ಕೆಮಿಕಲ್ಸ್ ಕಂಪನಿಯಲ್ಲಿ ಸಿಲಿಂಡರ್ ಸ್ಪೋಟ !

ಮಂಗಳೂರಿನ ಸೆಝ್ ಪ್ರದೇಶದಲ್ಲಿರುವ ಕ್ಯಾಟಸಿಂತ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ ಸ್ಫೋಟ ಸಂಭವಿಸಿದೆ. ಕಂಪನಿಯ ಹೊರ ಭಾಗದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಪ್ರೆಟ್ರೋಲಿಯಂ ಉತ್ಪನ್ನಗಳ ಕಂಪನಿ ಇದಾಗಿದ್ದು, ಸ್ಪೋಟಕ್ಕೆ ಕಂಪನಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿರುವುದೇ ಕಾರಣ ಎನ್ನಲಾಗಿದೆ . ಸಾವು ನೋವಿನ ಕುರಿತು ಮಾಹಿತಿಗಳು ಕೂಡಾ ವರದಿಯಾಗಿಲ್ಲ.

Update (3.53pm – 24.04.2021) : ಸ್ಪೋಟ ನಡೆದಿರುವುದು ಕ್ಯಾಟಸಿಂತ್ ಕೆಮಿಕಲ್ಸ್ ಕಂಪನಿಯಲ್ಲಾಗಿದೆ. ಕಂಪನಿಯಲ್ಲಿನ ಸಿಬ್ಬಂದಿಗಳ ಊಟದ ಸಮಯದಲ್ಲಿ ಈ ಸ್ಪೋಟ ಸಂಭವಿಸಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿ ಮಂಗಳೂರು ಕದ್ರಿ ಅಗ್ನಿಶಾಮಕ ದಳ, ಎಚ್ಪಿಸಿಎಲ್, ಎನ್ಎಂಪಿಟಿ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ

ಮಂಗಳೂರು SEZ  ಒಳಗಿನ ಕ್ಯಾಟಸಿಂತ್ ಕೆಮಿಕಲ್ಸ್ ಕಂಪನಿಯಲ್ಲಿ ಸಿಲಿಂಡರ್ ಸ್ಪೋಟ !
Join Whatsapp
Exit mobile version