Home ಟಾಪ್ ಸುದ್ದಿಗಳು ಶಿವಮೊಗ್ಗದಲ್ಲಿ ಭಾರೀ ಸ್ಫೋಟ : ಕನಿಷ್ಠ 6 ಬಲಿ; 15 ಮಂದಿ ಸಾವಿಗೀಡಾಗಿರುವ ಸಾಧ್ಯತೆ

ಶಿವಮೊಗ್ಗದಲ್ಲಿ ಭಾರೀ ಸ್ಫೋಟ : ಕನಿಷ್ಠ 6 ಬಲಿ; 15 ಮಂದಿ ಸಾವಿಗೀಡಾಗಿರುವ ಸಾಧ್ಯತೆ

ಶಿವಮೊಗ್ಗ : ಇಲ್ಲಿನ ಹುಣಸೋಡು ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶವೊಂದರಲ್ಲಿ ಕಳೆದ ರಾತ್ರಿ ಭೀಕರ ಸ್ಫೋಟವೊಂದು ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರು ಸಾವಿಗೀಡಾಗಿರುವ ಶಂಕೆಯಿದೆ.

ಸ್ಫೋಟದ ತೀವ್ರತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದೆ. ಹಲವು ಮನೆ ಕಟ್ಟಡಗಳಿಗೆ ಹಾನಿಯಾಗಿದೆ. ಭಯಭೀತರಾದ ಜನ ಮನೆಗಳಿಂದ ದಿಕ್ಕಾಪಾಲಾಗಿ ಹೊರಗೆ ಓಡಿದ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ.

ರಾತ್ರಿ 10:30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಮೃತ ಕಾರ್ಮಿಕರ ಮೃತದೇಹಗಳು ಛಿದ್ರಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಣಿಗಾರಿಕೆ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಪೆಟ್ಟಿಗೆಯಷ್ಟು ಜಿಲೆಟಿನ್ ಏಕಕಾಲದಲ್ಲಿ ಸ್ಫೋಟಿಸಿದೆ.  

Join Whatsapp
Exit mobile version