ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಅ.16ಕ್ಕೆ ಕರಾಳ ದಿನ ಆಚರಣೆ: ವಾಟಾಳ್ ನಾಗರಾಜ್

Prasthutha|

ಬೆಂಗಳೂರು: ತಮಿಳುನಾಡಿಗೆ ಕರ್ನಾಟಕ ನೀರು ಬಿಡುತ್ತಿರುವುದನ್ನು ಖಂಡಿಸಿ ಅ.16ಕ್ಕೆ ಕರಾಳ ದಿನ ಆಚರಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

- Advertisement -

ಅ.16ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕಾವೇರಿಗಾಗಿ ಪ್ರತಿಭಟನೆ ನಡೆಯಲಿದೆ. ಕಾವೇರಿಗಾಗಿ ಕರಾಳ ದಿನ ಆಚರಿಸುವ ಬಗ್ಗೆ ಮಾತನಾಡಿದ ವಾಟಾಳ್ ನಾಗರಾಜ್, ಕಾವೇರಿ ನೀರು ನಿರ್ವಹಣಾ ಮಂಡಳಿಯಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ತಮಿಳುನಾಡಿನ ಪರವಾಗಿ ತಿರ್ಪು ಕೊಡಲಾಗಿದೆ. ನಮ್ಮಲ್ಲಿ ನೀರಿದ್ರೆ ನಾವು ತಮಿಳುನಾಡಿಗೆ ಕೊಡಬಾರದು ಅಂತಾ ಹೇಳುತ್ತಿರಲಿಲ್ಲ. ಸ್ಟಾಲಿನ್ ಇಂಡಿಯಾ ಮೈತ್ರಿಕೂಟಕ್ಕೆ ಬೆದರಿಕೆ ಹಾಕಿದ್ದಾರೆ. ಇಂಡಿಯಾ ಮೈತ್ರಿಕೂಟ ಕರ್ನಾಟಕ ರಾಜ್ಯಕ್ಕೂ ಯಾವ ಸಂಬಂಧವಿಲ್ಲ. ಸ್ಟಾಲಿನ್ ವಾದ ಸರಿಯಿಲ್ಲ. ಪ್ರಾಧಿಕಾರದ ವಿರುದ್ಧ ಸೋಮವಾರ ಬೃಹತ್ ಪ್ರತಿಭಟನೆ ಮಾಡ್ತೇವೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಕಪ್ಪು ಬಾವುಟ ಪ್ರದರ್ಶನ ಮಾಡ್ತೇವೆ ಎಂದು ಹೇಳಿದ್ದಾರೆ.

Join Whatsapp