ಬಾಬಾ ರಾಮ್ ದೇವ್ ಹೇಳಿಕೆ ಖಂಡಿಸಿ ವೈದ್ಯರಿಂದ ಕಪ್ಪು ದಿನ ಆಚರಣೆ

Prasthutha|

ಯೋಗ ಗುರು ಬಾಬಾ ರಾಮದೇವ್ ಅಲೋಪತಿ ಮತ್ತು ಆಧುನಿಕ ಔಷಧಿಗಳ ವಿರುದ್ದದ ಹೇಳಿಕೆಯನ್ನು ಖಂಡಿಸಿ ವೈದ್ಯರ ಸಂಘ ದೇಶಾದ್ಯಂತ ಮಂಗಳವಾರ ಕಪ್ಪು ದಿನ ಆಚರಿಸುತ್ತಿದೆ.ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಫೋರ್ಡಾ) ಕಪ್ಪು ದಿನ ಆಚರಣೆಗೆ ಕರೆ ನೀಡಿತ್ತು. ಪ್ರತಿಭಟನೆ ದಿನಪೂರ್ತಿ ನಡೆಯಲಿದೆ. ಆದರೆ ಈ ಪ್ರತಿಭಟನೆಯಿಂದ ರೋಗಿಗಳ ಆರೈಕೆಗೆ ತೊಂದರೆಯಾಗುವುದಿಲ್ಲ ಎಂದು ಕೂಡಾ ಫೋರ್ಡಾ ತಿಳಿಸಿದೆ.

- Advertisement -

ರಾಮ್ದೇವ್ ಅಲೋಪತಿ ಚಿಕಿತ್ಸೆಯನ್ನು ‘ಮೂರ್ಖತನದ ವಿಜ್ಞಾನ’ ಎಂದು ಟೀಕಿಸಿದ್ದರು. ರೆಮ್ಡಿಸಿವಿರ್, ಫೆವಿಫ್ಲೂ ಮತ್ತು ಇತರ ಔಷಧಿಗಳು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂದು ಹೇಳಿದ್ದರು.  ಭಾರತೀಯ ವೈದ್ಯಕೀಯ ಸಂಘ -ಐಎಂಎ ವೈದ್ಯರು ಕೂಡ ತಮ್ಮ ಕರ್ತವ್ಯದ ಸ್ಥಳಗಳಲ್ಲಿ ಕಪ್ಪು ಬ್ಯಾಡ್ಜ್ಗಳನ್ನು ಧರಿಸುವ ಪ್ರತಿಭಟನೆ ನಡೆಸುತ್ತಿದ್ದಾರೆ.

Join Whatsapp