ರಾಂಚಿ: ಜಾರ್ಖಂಡ್ ನಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಮನೆ ಮೇಲೆ ದಾಳಿ ನಡೆಸಲು ಬಂದ ಐಟಿ ಅಧಿಕಾರಿಗಳ ಕಾರಿನಲ್ಲಿ ಬಿಜೆಪಿಯ ಸ್ಟಿಕ್ಕರ್ ಕಂಡು ಬಂದಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ಕುಮಾರ್ ಜೈಮಂಗಲ್ ಎಂಬ ಕಾಂಗ್ರೆಸ್ ಶಾಸಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿಗೆ ಬಂದ ಅಧಿಕಾರಿಗಳು ಬಳಸಿದ ಕಾರಿನ ಮೇಲೆ ಬಿಜೆಪಿ ಸ್ಟಿಕ್ಕರ್ ಕಂಡು ಬಂದಿದೆ.
ಈ ಕುರಿತು ಕಾಂಗ್ರೆಸ್ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಸ್ಟಿಕ್ಕರ್ ಕಂಡು ಬಂದಿದ್ದ ಕಾರು ಬಿಜೆಪಿ ಮುಖಂಡ ದಿನೇಶ್ ಮಹತೋ ಅವರ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಆರೋಪಿಸಿದೆ.
ಕಾರಿನ ಮೇಲೆ ‘ಬಿಜೆಪಿ ವಿಧಾನಸಭೆ ಪಾಸ್’ ಎಂದು ಉಲ್ಲೇಖಿಸಿದ್ದು, ಸ್ಟಿಕ್ಕರನ್ನು ಅಧಿಕಾರಿಯೊಬ್ಬರು ಕಿತ್ತುಹಾಕುವುದು ವಿಡಿಯೋವೊಂದರಲ್ಲಿ ಸೆರೆಯಾಗಿದೆ.
ಆಪರೇಷನ್ ಕಮಲಕ್ಕೆ ಸಹಕಾರ ನೀಡದ್ದಕ್ಕೆ ನನ್ನ ಮತ್ತು ಇನ್ನಿತರ ಕೆಲವು ಕಾಂಗ್ರೆಸ್ ನಾಯಕರ ಮೇಲೆ ತನಿಖಾ ಸಂಸ್ಥೆಗಳನ್ನು ಬಳಸಿ ಬಿಜೆಪಿ ರಾಜಕೀಯ ಬೇಟೆಯಾಡುತ್ತಿದೆ ಎಂದು ಕಾಂಗ್ರೆಸ್ ಶಾಸಕ ಜೈಮಂಗಲ್ ಆರೋಪಿಸಿದ್ದಾರೆ.