ಬೆಂಗಳೂರು: ಸತತ ಎರಡು ದಿನಗಳಿಂದ ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್, ಬಿಜೆಪಿಯ ಯಾವ ಹಗರಣಗಳು ತನಿಖೆಯಾಗುವುದಿಲ್ಲ, ಲೂಟಿಯೇ ಬಿಜೆಪಿ ಧರ್ಮ ಎಂದು ಸರಣಿ ತಿರುಗೇಟು ನೀಡಿದೆ.
ಬಿಜೆಪಿ ಸರ್ಕಾರದ ವಿರುದ್ಧ ಹೋರಾಟವು ಮತ್ತೊಮ್ಮೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟವನ್ನು ನೆನಪಿಸುತ್ತಿದೆ.ಹೋರಾಡುತ್ತೇವೆ, ದೇಶವನ್ನು ಫ್ಯಾಸಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸುತ್ತೇವೆ, ಆ ಬದ್ಧತೆ ನಮಗಿದೆ, ಜನಪ್ರತಿನಿಧಿಗಳೊಂದಿಗೆ ಪೊಲೀಸರ ಈ ನಡವಳಿಕೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.
ರಫೇಲ್ ಹಗರಣ ಮುಚ್ಚಿ ಹಾಕಲಾಗುತ್ತದೆ. ಫೈಲ್‌ಗಳು ಕಳೆದುಹೋಗುತ್ತವೆ! ಪಿಎಂ ಕೇರ್ಸ್ ಹಗರಣ ತನಿಖೆಯೇ ನಡೆಯುವುದಿಲ್ಲ, ಜನರ ಹಣ ಲೂಟಿ ಹೊಡೆಯಲಾಗುತ್ತದೆ. ಸಿಎಂ ಹುದ್ದೆಗೆ ₹2500 ಕೋಟಿ ಆಫರ್ ಮಾಡುವುದು ತನಿಖೆಯೇ ಆಗುವುದಿಲ್ಲ. ಲೂಟಿಯೇ ಬಿಜೆಪಿ ಧರ್ಮ ಎಂದು ಕಾಂಗ್ರೆಸ್ ಟೀಕಿಸಿದೆ.