Home ಕರಾವಳಿ ಕಲ್ಲೇರಿ, ಸೇತುವೆಯ ಉದ್ಘಾಟನೆಯನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿದ ಬಿಜೆಪಿ ನಡೆ ಖಂಡನೀಯ: ಎಸ್ ಡಿಪಿಐ

ಕಲ್ಲೇರಿ, ಸೇತುವೆಯ ಉದ್ಘಾಟನೆಯನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿದ ಬಿಜೆಪಿ ನಡೆ ಖಂಡನೀಯ: ಎಸ್ ಡಿಪಿಐ

ಬೆಳ್ಳಾರೆ: ಕಲ್ಮಡ್ಕ ಗ್ರಾಮದ ಕಲ್ಲೇರಿಯಲ್ಲಿ ಪುತ್ತೂರು-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಸರ್ಕಾರದ ಹಣದಿಂದ ನಿರ್ಮಿಸಿರುವ ಸೇತುವೆಯ ಉದ್ಘಾಟನೆಯನ್ನು ಪಕ್ಷದ ಕಾರ್ಯಕ್ರಮದಂತೆ ಬಿಂಬಿಸಿದ ಬಿಜೆಪಿ ನಡೆಯನ್ನು ಎಸ್ ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ಹಮೀದ್ ಮರಕ್ಕಡ ಖಂಡಿಸಿದ್ದಾರೆ.


ಉದ್ಘಾಟನೆಯ ಸಮಯದಲ್ಲಿ ಬಿಜೆಪಿ ಪಕ್ಷದ ಧ್ವಜ ಹಿಡಿದುಕೊಂಡು ಸ್ಥಳೀಯ ಪಂಚಾಯತ್ ಸದಸ್ಯರನ್ನು ಕಡೆಗಣಿಸಿ ಯಾವುದೇ ಪ್ರೋಟೋಕಾಲ್ ನಿಯಮ ಪಾಲನೆ ಮಾಡದೆ ಸರ್ಕಾರಿ ಹಣದಿಂದ ಮಾಡಿದ ಕೆಲಸವನ್ನು ಬಿಜೆಪಿ ಪಕ್ಷದಿಂದ ಹಣ ಬಿಡುಗಡೆ ಮಾಡಿದ ರೀತಿಯಲ್ಲಿ ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನು ಮಾಡಿದ್ದು ಕಾನೂನು ವಿರೋಧಿ ಕೃತ್ಯವಾಗಿದೆ. ಸೇತುವೆ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಅಂಗಾರ ಕೂಡ ಇದರ ಬಗ್ಗೆ ತುಟಿ ಬಿಚ್ಚದೆ ಮೌನ ಸಮ್ಮತಿ ನೀಡಿದ್ದು ಖಂಡನಾರ್ಹವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಮೀದ್ ಮರಕ್ಕಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version