Home ಟಾಪ್ ಸುದ್ದಿಗಳು ಬಿಜೆಪಿಯ ಮನುವಾದಿಗಳಿಗೆ ಹಿಂದುಳಿದವರನ್ನು ಕಂಡರೆ ಕೆಂಡದಂತಹ ಕೋಪ ಬರುತ್ತೆ: ಎಂ.ಬಿ ಪಾಟೀಲ್

ಬಿಜೆಪಿಯ ಮನುವಾದಿಗಳಿಗೆ ಹಿಂದುಳಿದವರನ್ನು ಕಂಡರೆ ಕೆಂಡದಂತಹ ಕೋಪ ಬರುತ್ತೆ: ಎಂ.ಬಿ ಪಾಟೀಲ್

ಬೆಂಗಳೂರು: ಮಡಿಕೇರಿ ಪ್ರವಾಸದಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಬಿಜೆಪಿಯ ಮನುವಾದಿಗಳಿಗೆ ಶೂದ್ರರು ಮತ್ತು ಹಿಂದುಳಿದ ವರ್ಗದವರನ್ನು‌ ಕಂಡರೆ ಕೆಂಡದಂತಹ ಕೋಪ ಬರುತ್ತೆ ಎಂದು ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತರ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಎಂ.ಬಿ.ಪಾಟೀಲ್, ಬಿಜೆಪಿಯ ಮನುವಾದಿಗಳಿಗೆ ಶೂದ್ರರು-ಹಿಂದುಳಿದವರೆಂದರೆ ಕೆಂಡದಂತಹ ಕೋಪ ಎಂಬುದಕ್ಕೆ ಇದೇ ಸಾಕ್ಷಿ. ಶ್ರೀ ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಸಹಿಸಲಾಗುತ್ತಿಲ್ಲವೇ?
ಎಂದು ಪ್ರಶ್ನಿಸಿದ್ದಾರೆ.

ಹೀನ ಕೃತ್ಯಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಜೆಪಿಗರು ತೋರಿದ್ದಾರೆ!
ಬಸವಣ್ಣ-ಸಂಗೊಳ್ಳಿರಾಯಣ್ಣ-ದಾಸ ಶ್ರೇಷ್ಠರನ್ನು ಕಂಡಂತಹ ಈ ನಾಡಿನಲ್ಲಿ ನಿಮ್ಮ ಕುತಂತ್ರಗಳು ನಡೆಯದು ಎಂದು ಪಾಟೀಲ್ ತಿಳಿಸಿದರು.

Join Whatsapp
Exit mobile version