Home ಟಾಪ್ ಸುದ್ದಿಗಳು ಉದಯಪುರ ಹತ್ಯೆ ಆರೋಪಿಗಳೊಂದಿಗಿನ ಬಿಜೆಪಿ ನಂಟು: ದೆಹಲಿಯ ಹಲವೆಡೆ ಬ್ಯಾನರ್ ಪ್ರತ್ಯಕ್ಷ

ಉದಯಪುರ ಹತ್ಯೆ ಆರೋಪಿಗಳೊಂದಿಗಿನ ಬಿಜೆಪಿ ನಂಟು: ದೆಹಲಿಯ ಹಲವೆಡೆ ಬ್ಯಾನರ್ ಪ್ರತ್ಯಕ್ಷ

ನವದೆಹಲಿ: ಉದಯಪುರ ಹತ್ಯೆ ಆರೋಪಿಗಳೊಂದಿಗಿನ ಬಿಜೆಪಿ ನಂಟು ಕುರಿತ ಫೋಟೋಗಳನ್ನು ಒಳಗೊಂಡ ಬ್ಯಾನರ್ ಅನ್ನು ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಹೆಸರಿನಲ್ಲಿ ದೆಹಲಿಯಾದ್ಯಂತ ಹಾಕಲಾಗಿದ್ದು, ‘ಇವರು ರಾಷ್ಟ್ರೀಯವಾದಿಗಳೇ? ಭಯೋತ್ಪಾದಕರೇ’ ಎಂದು ಅದರಲ್ಲಿ ಪ್ರಶ್ನಿಸಲಾಗಿದೆ.

 ರಾಜಧಾನಿ ದೆಹಲಿಯ ವಿವಿಧ ಸ್ಥಳಗಳಲ್ಲಿ ಜಮ್ಮುವಿನ ಭಯೋತ್ಪಾದಕ ತಾಲಿಬ್ ಮತ್ತು ಉದಯಪುರ ಹತ್ಯೆಯ ಆರೋಪಿ ರಿಯಾಝ್ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವುದನ್ನು ತೋರಿಸುವ ಬೃಹತ್ ಬ್ಯಾನರ್ ಗಳನ್ನು ಐವೈಸಿ ಹೆಸರಿನಲ್ಲಿ ಹಾಕಲಾಗಿದೆ.

ಉದಯಪುರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿರುವ ಬಗ್ಗೆ ಕಾಂಗ್ರೆಸ್ ಶನಿವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.

ಆರೋಪಿ ರಿಯಾಝ್ ಅಟ್ಟಾರಿ ಮತ್ತು ಬಿಜೆಪಿ ಮುಖಂಡನ ನಡುವೆ ಸಂಬಂಧವಿದೆ ಎಂದು ಹೇಳುತ್ತಿರುವ ಕೆಲವು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, “ನಾವು ಆ ಹೇಳಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ್ದು,  ರಿಯಾಝ್ ಅಟ್ಟಾರಿ ‘ಬಿಜೆಪಿ ಕಾರ್ಯಕರ್ತ’ ಎಂದು ಉಲ್ಲೇಖಿಸಲಾದ ರಾಜಸ್ಥಾನ ಬಿಜೆಪಿ ನಾಯಕರ ಹಳೆಯ ಫೇಸ್ಬುಕ್ ಪೋಸ್ಟ್ ಗಳು ಲಭಿಸಿವೆ’ ಎಂದು ತಿಳಿಸಿದ್ದಾರೆ.

“ಕಳೆದ ವಾರದಲ್ಲಿ ನಡೆದ ಎರಡು ಘಟನೆಗಳು ಬಿಜೆಪಿಯ ಎರಡು ಮುಖಗಳನ್ನು ಅನಾವರಣಗೊಳಿಸಿವೆ. ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಅವರ ಭೀಕರ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ ಎಂದು ನಮಗೆ ಮೊದಲು ತಿಳಿಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಸೆರೆಹಿಡಿಯಲಾದ ತಾಲಿಬ್, ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ. ಈ ಹಿಂದೆ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಫೋಟೋಗಳಲ್ಲಿ ಸೆರೆಹಿಡಿಯಲ್ಪಟ್ಟ ಬಿಜೆಪಿ ಪದಾಧಿಕಾರಿ ಮಾತ್ರವಲ್ಲ ಮತ್ತು ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದನು ಎಂದು ನಂತರ ತಿಳಿದುಬಂದಿದೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು.

Join Whatsapp
Exit mobile version