Home ಟಾಪ್ ಸುದ್ದಿಗಳು ಬಿಜೆಪಿಯ ಸಿದ್ಧಾಂತವು ಮಣಿಪುರಕ್ಕೆ ಬೆಂಕಿ ಹಚ್ಚಿದೆ: ಮೋದಿ ಬಯಸಿದರೆ 2-3 ದಿನಗಳಲ್ಲಿ ಶಾಂತಿ | ರಾಹುಲ್...

ಬಿಜೆಪಿಯ ಸಿದ್ಧಾಂತವು ಮಣಿಪುರಕ್ಕೆ ಬೆಂಕಿ ಹಚ್ಚಿದೆ: ಮೋದಿ ಬಯಸಿದರೆ 2-3 ದಿನಗಳಲ್ಲಿ ಶಾಂತಿ | ರಾಹುಲ್ ಗಾಂಧಿ

ಜೈಪುರ: ಬಿಜೆಪಿಯ ಸಿದ್ಧಾಂತವು ಮಣಿಪುರಕ್ಕೆ ಬೆಂಕಿ ಹಚ್ಚಿದೆ. ಪ್ರಧಾನಿ ನರೇಂದ್ರ ಮೋದಿ ಬಯಸಿದರೆ ಎರಡು-ಮೂರು ದಿನಗಳಲ್ಲಿ ಜ್ವಾಲೆ ನಂದಿಸಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.


ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಮಂಗರ್ ಧಾಮ್ ನಲ್ಲಿ ಬುಧವಾರ ಪಕ್ಷದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮಣಿಪುರವನ್ನು ವಿಭಜಿಸಿದ್ದಾರೆ. ಎರಡು–ಮೂರು ತಿಂಗಳಿನಿಂದ ಈಶಾನ್ಯ ರಾಜ್ಯವು ಭಾರತದ ಭಾಗವಲ್ಲ ಎಂದು ತೋರುತ್ತದೆ ಎಂದು ಆರೋಪಿಸಿದರು.


‘ಬಿಜೆಪಿಯ ಸಿದ್ಧಾಂತವು ಮಣಿಪುರಕ್ಕೆ ಬೆಂಕಿ ಹಚ್ಚಿದೆ. ಜನರನ್ನು ಕೊಲ್ಲಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಮೋದಿ ಬಯಸಿದರೆ ಎರಡು-ಮೂರು ದಿನಗಳಲ್ಲಿ ಮಣಿಪುರದಲ್ಲಿ ಬೆಂಕಿ ನಂದಿಸಬಹುದು. ಆದರೆ, ಅವರು ಬೆಂಕಿ ಹೊತ್ತಿಸಲು ಬಯಸುತ್ತಾರೆ’ ಎಂದು ಅವರು ಹೇಳಿದರು.

Join Whatsapp
Exit mobile version