ಬೆಂಗಳೂರು: ದೇಶದ ಯಾವುದೇ ವಿಧ್ವಂಸಕಾರಿ ಶಕ್ತಿಗಳ ಮೂಲ ಕೆದಕಿದಾಗ ಅಲ್ಲಿ ಬಿಜೆಪಿ, RSSನ ನಂಟು ಇರುತ್ತದೆ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ “ಭಾರತೀಯ ಟೆರರಿಸ್ಟ್ ಪಾರ್ಟಿ”ಯ ಒಂದೊಂದೇ ಕರಾಳ ಮುಖಗಳು ಹೊರಬರುತ್ತಿವೆ. ಉದಯಪುರದ ಹಂತಕರು, ಕಾಶ್ಮೀರದ ಉಗ್ರರು ಬಿಜೆಪಿಯ ಸದಸ್ಯರೇ ಆಗಿದ್ದಾರೆ. ಪುಲ್ವಾಮ ದಾಳಿಯ ತನಿಖೆಯನ್ನು ಹಳ್ಳ ಹಿಡಿಸಿದ್ದು ಏಕೆ ಎಂದು ಜನತೆ ಈಗ ಸ್ಪಷ್ಟತೆಗೆ ಬರಬಹುದು ಎಂದು ಹೇಳಿದೆ.