ಹೊಸದಿಲ್ಲಿ: ಹಿಮಾಚಲ ಪ್ರದೇಶ ಮತ್ತು ಹರ್ಯಾಣ ರಾಜ್ಯಗಳ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸೋಲು “ರೈತ ಚಳವಳಿಯ ಗೆಲುವಾಗಿದೆ” ಎಂದು ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು)ದ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಬಿಜೆಪಿಯು ತೋಳ್ಬಲದ ತಂತ್ರಗಾರಿಕೆಯನ್ನು ಬಳಸಿ ಈ ದೇಶದ ಜನತೆಯನ್ನು ಹತ್ತಿಕ್ಕಲು ಬಯಸುತ್ತಿದೆ. ಹಣದುಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಖಾಸಗೀಕರಣದ ಮೂಲಕ ದೇಶವನ್ನು ಮಾರಲು ಹೊರಟಿರುವ ಈ ಸರ್ಕಾರದ ಆಡಳಿತದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಹಿಮಾಚಲ ಪ್ರದೇಶ ಮತ್ತು ಹರ್ಯಾಣದಲ್ಲಿ ಬಿಜೆಪಿ ಸೋಲನ್ನನುಭವಿಸಿದೆ. ಈ ಸೋಲಿಗೆ ಜನತೆಯ ಅಸಮಾಧಾನವೇ ಕಾರಣ. ಬಿಜೆಪಿಯ ಸೋಲು ನಮ್ಮ ರೈತ ಹೋರಾಟದ ಗೆಲುವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.