Home ಟಾಪ್ ಸುದ್ದಿಗಳು ಬಿಜೆಪಿಯಿಂದ ಭಾರತೀಯ ಪ್ರಜಾಪ್ರಭುತ್ವಕ್ಕೆ ‘ಸರಿಪಡಿಸಲಾಗದ ಹಾನಿ’ : ಪ್ರೋಗ್ರೆಸ್ಸೀವ್ ಇಂಟರ್ನ್ಯಾಷನಲ್

ಬಿಜೆಪಿಯಿಂದ ಭಾರತೀಯ ಪ್ರಜಾಪ್ರಭುತ್ವಕ್ಕೆ ‘ಸರಿಪಡಿಸಲಾಗದ ಹಾನಿ’ : ಪ್ರೋಗ್ರೆಸ್ಸೀವ್ ಇಂಟರ್ನ್ಯಾಷನಲ್

ನವದೆಹಲಿ : ಬಿಜೆಪಿ ಅನಿಯಂತ್ರಿತ ಬಂಧನಗಳನ್ನು ಮಾಡುವ ಮೂಲಕ ಭಾರತೀಯ ಪ್ರಜಾಪ್ರಭುತ್ವಕ್ಕೆ ‘ಸರಿಪಡಿಸಲಾಗದ ಹಾನಿ’ ಉಂಟುಮಾಡುತ್ತಿದೆ. ನರೇಂದ್ರ ಮೋದಿ ಸರಕಾರವು ಅಹಿಂಸಾತ್ಮಕ ಪ್ರತಿಭಟನಾಕಾರರನ್ನು ತಪ್ಪಾಗಿ ನಿರೂಪಿಸುವುದನ್ನು ನಿಲ್ಲಿಸಬೇಕು ಎಂದು ಪ್ರೋಗ್ರೆಸ್ಸೀವ್ ಇಂಟರ್ ನ್ಯಾಷನಲ್ ಒತ್ತಾಯಿಸಿದೆ.

 ಪ್ರಗತಿಪರ ಧ್ವನಿಗಳನ್ನು ಒಗ್ಗೂಡಿಸುವುದಕ್ಕಾಗಿ ಕೆಲಸ ಮಾಡುತ್ತಿರುವ ಅಂತರರಾಷ್ಟ್ರೀಯ ಸಂಸ್ಥೆ ಪ್ರೋಗ್ರೆಸ್ಸೀವ್ ಇಂಟರ್ ನ್ಯಾಷನಲ್, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳನ್ನು ತಡೆಯಲು ಯುಎಪಿಎ ಕಾನೂನನ್ನು ಬಳಸುವುದನ್ನು ಕೂಡಾ ಟೀಕಿಸಿದೆ.

ಭಾಷಾ ಶಾಸ್ತ್ರಜ್ಞ ನೋಮ್ ಚೋಮ್ಸ್ಕಿ, ಅಮೇರಿಕಾದ ತತ್ವಜ್ಞಾನಿ ಕಾರ್ನೆಲ್ ವೆಸ್ಟ್, ಗ್ರೀಕ್ ಅರ್ಥಶಾಸ್ತ್ರಜ್ಞ ಯಾನಿಸ್ ವರುಫಾಕಿಸ್, ಅಮೇರಿಕನ್ ನಟ ಜಾನ್ ಕೊಸಾಕ್, ಬ್ರಿಟಿಷ್ ಸಂಸದ ಜಾನ್ ಮೆಕ್ ಡೊನೆಲ್, ಲೇಖಕಿ ಅರುಂಧತಿ ರಾಯ್, ಅರ್ಥಶಾಸ್ತ್ರಜ್ಞ ಜೀನ್ ಡ್ರೋಸ್, ಸಾಮಾಜಿಕ ಕಾರ್ಯಕರ್ತೆ ಅರುಣಾ ರಾಯ್ ಮತ್ತು ಇತರರು ಹೇಳಿಕೆಗೆ ಸಹಿ ಹಾಕಿದ್ದಾರೆ.

ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದೂ ಪ್ರತಿಭಟನಾಕಾರರ ವಿರುದ್ಧ ಭಯೋತ್ಪಾದನೆ ವಿರೋಧಿ ಮತ್ತು ರಾಷ್ಟ್ರೀಯ ಭದ್ರತಾ ಕಾನೂನುಗಳನ್ನು ದುರುಪಯೋಗ ಪಡಿಸುವುದನ್ನು ನಿಲ್ಲಿಸಬೇಕೆಂದೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Join Whatsapp
Exit mobile version