ಲಕ್ನೋ: ಬಿಜೆಪಿ ಹಣ ಬಳಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
ಶ್ರಾವಸ್ತಿಗೆ ತೆರಳುತ್ತಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಟಿಕಾಯತ್, ಅವರು (ಬಿಜೆಪಿ) ಇಡೀ ಪ್ರತಿಪಕ್ಷವನ್ನು ಕಿತ್ತೊಗೆಯಲು ಬಯಸುತ್ತಾರೆ, ಇದರಿಂದ ಒಂದು ಪಕ್ಷವು ಮಾತ್ರ ದೇಶವನ್ನು ಆಳುತ್ತದೆ. ಅವರು ಹಣಬಲವನ್ನು ಬಳಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳನ್ನು ದುರ್ಬಲಗೊಳಿಸುತ್ತಾರೆ ಎಂದು ಆರೋಪಿಸಿದರು.
ಈ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ 100 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿಗಳು ತಿರುಚಿದ್ದಾರೆ. ಕೇಸರಿ ಪಕ್ಷದ ಆಣತಿಯಂತೆ ಯಂತ್ರವು ಕೆಲಸ ಮಾಡಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ ಬಗ್ಗೆ ಕೇಳಿದಾಗ, ಟಿಕಾಯತ್, ದೇಶವನ್ನು ಒಗ್ಗೂಡಿಸಲು ಇದು ಸರಿಯಾದ ಕ್ರಮವಾಗಿದೆ ಆದರೆ ಅದನ್ನು ಮೊದಲೇ ಮಾಡಬೇಕಿತ್ತು ಎಂದು ಹೇಳಿದರು.