Home ಟಾಪ್ ಸುದ್ದಿಗಳು ಬಿಜೆಪಿ ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸುತ್ತಿದೆ । ಅಸದುದ್ದೀನ್ ಉವೈಸಿ

ಬಿಜೆಪಿ ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸುತ್ತಿದೆ । ಅಸದುದ್ದೀನ್ ಉವೈಸಿ

ಮೊರಾದಾಬಾದ್: ದೇಶದ ಕೋಮು ಸೌಹಾರ್ದತೆ ಮತ್ತು ಭಾರತೀಯ ಸಂವಿಧಾನದ ಘನತೆಯನ್ನು ಹಾಳುಗೆಡವಲು ಬಿಜೆಪಿ ಯತ್ನಿಸುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಉವೈಸಿ ಆರೋಪಿಸಿದ್ದಾರೆ.

ದಿಂಗರ್ ಪುರದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದ ಉವೈಸಿ, ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಹರಡುವ ಜನರನ್ನು ಬೆಂಬಲಿಸುತ್ತಿದ್ದಾರೆ ಎಂದು ಟೀಕಿಸಿದರು.

ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧರ್ಮಸಂಸದ್ ಅನ್ನು ಉಲ್ಲೇಖಿಸಿ ಮಾತನಾಡಿದ ಉವೈಸಿ, ಸಂಘಪರಿವಾರದ ಮುಖಂಡರು ಮುಸ್ಲಿಮರ ವಿರುದ್ಧದ ಹಿಂಸಾಚಾರಕ್ಕೆ ಕರೆ ನೀಡಿದ್ದರು ಎಂದಿದ್ದಾರೆ.

ಮಾತ್ರವಲ್ಲ, ಬುಲ್ಲಿ ಬಾಯಿ ಆ್ಯಪ್ ನ ಹರಾಜಿನಲ್ಲಿ ಮುಸ್ಲಿಮ್ ಮಹಿಳೆಯರ ಫೋಟೋ ಅಪ್ಲೋಡ್ ಮಾಡಿದ ಕುರಿತ ನಡೆಯನ್ನು ಉವೈಸಿ ತೀವ್ರವಾಗಿ ಖಂಡಿಸಿದ್ದಾರೆ.

ಬಿಜೆಪಿಯವರು ಕೇವಲ ಮಹಿಳೆಯರ ಪರ ಘೋಷಣೆಗಳನ್ನು ಕೂಗುತ್ತಾರೆ. ಆದರೆ ವಾಸ್ತವದಲ್ಲಿ ಅವರನ್ನು ಗೌರವಿಸುವುದಿಲ್ಲ ಎಂದು ಆರೋಪಿಸಿದರು.

Join Whatsapp
Exit mobile version