ಹಾಸನ: ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಎಚ್.ಕೆ ಸುರೇಶ್ ಮತದಾರರಿಗೆ ಬಾಡೂಟ, ಗುಂಡು ಪಾರ್ಟಿಯನ್ನು ಆಯೋಜನೆ ಮಾಡಿದ್ದು, ಕಂಠಪೂರ್ತಿ ಕುಡಿದು ಮತದಾರರು ಎಲ್ಲೆಂದರಲ್ಲಿ ಮಲಗಿರುವ ವೀಡಿಯೋ ವೈರಲ್ ಆಗಿದೆ.
ಜಿಲ್ಲೆಯಲ್ಲಿ ಚುನಾವಣೆ ಕಾವು ರಂಗೇರುತ್ತಿದ್ದು, ಟಿಕೆಟ್ ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಹಲವು ರೀತಿಯ ಆಮಿಷ ಒಡ್ಡುತ್ತಿದ್ದಾರೆ.
ಪ್ರತಿದಿನ ಒಂದೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಸುರೇಶ್ ಬಾಡೂಟ ಆಯೋಜನೆ ಮಾಡುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಬಾಡೂಟ, ಮದ್ಯ ಜೊತೆಗೆ ಗಿಫ್ಟ್ ಮೂಲಕ ಮತದಾರರಿನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಬಾಡೂಟ ಉಂಡು ಮದ್ಯ ಸೇವಿಸಿದ ಕೆಲವು ಮತದಾರರು ಎಲ್ಲೆಂದರಲ್ಲಿ ಬಿದ್ದುಕೊಂಡಿರುವುದು ಕಂಡುಬಂದಿದೆ.