Home ಟಾಪ್ ಸುದ್ದಿಗಳು ಬುಲ್ಡೋಜರಿಂಗ್ ಮುಂದುವರಿಸಿದ ಬಿಜೆಪಿ; ಯುಪಿ ಯಲ್ಲಿ ಮದರಸಾ ನೆಲಸಮ

ಬುಲ್ಡೋಜರಿಂಗ್ ಮುಂದುವರಿಸಿದ ಬಿಜೆಪಿ; ಯುಪಿ ಯಲ್ಲಿ ಮದರಸಾ ನೆಲಸಮ

ಲಕ್ನೋ: ಅಕ್ರಮ ಪ್ರವೇಶದ ಹೆಸರಿನಲ್ಲಿ ಮುಸ್ಲಿಮರ ಅಂಗಡಿಗಳು, ಮನೆಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಅಧಿಕಾರಿಗಳು ಧ್ವಂಸಗೊಳಿಸುವುದನ್ನು ಮುಂದುವರೆಸಿದ್ದಾರೆ. ಹಬ್ಬದ ಮರುದಿನ ಯಾವುದೇ ಮುನ್ನೆಚ್ಚರಿಕೆ ನೀಡದೆ  ಕಾನ್ಪುರದ ಘಟಂಪುರದಲ್ಲಿ ಇಸ್ಲಾಮಿಕ್ ಸೆಕೆಂಡರಿ ಮದರಸಾವನ್ನು ಪುರಸಭೆ ಅಧಿಕಾರಿಗಳು ಕೆಡವಿದ್ದಾರೆ.

ಮುನ್ನೆಚ್ಚರಿಕೆಗಳಿಲ್ಲದೆ ಮದರಸಾವನ್ನು ಕೆಡವಿದ್ದಾರೆ ಎಂಬುವುದು ವೀಡಿಯೋಗಳಿಂದ ಸ್ಪಷ್ಟವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕುರ್ ಆನ್ ಮತ್ತು ಇತರ ಪುಸ್ತಕಗಳನ್ನು ಎತ್ತಿಕೊಂಡು ಹೋಗುವುದನ್ನು ವಿಡಿಯೋ ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ. ಕುರ್ ಆನ್ ಮತ್ತು ಇತರ ಪವಿತ್ರ ಪುಸ್ತಕಗಳನ್ನು ಹೊರತೆಗೆಯಲು ಸಹ ಅವರು ಅನುಮತಿ ನೀಡಲಿಲ್ಲ ಎಂದು ಮದ್ರಸಾ ಅಧಿಕಾರಿಗಳು ಹೇಳಿದ್ದಾರೆ.

ಅಕ್ರಮವಾಗಿ ನಿರ್ಮಿಸಲಾದ ಕಟ್ಟಡವಾದ ಕಾರಣ  ನೆಲಸಮ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಕೇವಲ ಮುಸ್ಲಿಮರ ಆಸ್ತಿಗಳನ್ನು ಹುಡುಕಿ ನೆಲಸಮ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಮದರಸಾಕ್ಕೆ 18,900 ಚದರ ಅಡಿ ಸ್ವಂತ ಜಾಗವನ್ನು ನೀಡಲಾಗಿತ್ತು, ಆದರೆ ಮದ್ರಸಾ ಕಟ್ಟಡವನ್ನು ಹೆಚ್ಚುವರಿ 4 1,08,000 ಚದರ ಅಡಿ ವಿಸ್ತರಿಸಿ ಸರಕಾರ ಭೂಮಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪದ ಮೇಲೆ ಕಟ್ಟಡವನ್ನು ಕೆಡವಲಾಗಿದೆ.

ಕಾರ್ಯವಿಧಾನಗಳನ್ನು ಪೂರ್ತಿಗೊಳಿಸಿದ ಬಳಿಕ ಮದರಸಾ ಕಟ್ಟಡವನ್ನು ಶಾಂತಿಯುತವಾಗಿ ಕೆಡವಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿಲ್ಲ, ಧರ್ಮಗ್ರಂಥಗಳಿಗೆ ಅವಮಾನ ಮಾಡಿಲ್ಲ ಎಂದು ಘಟಂಪುರದ ಉಪವಿಭಾಗಾಧಿಕಾರಿಯೂ ಹೇಳಿದ್ದಾರೆ.  ಆದರೆ, ವೀಡಿಯೋದಲ್ಲಿ  ಕುರ್ ಆನ್ ಸೇರಿದಂತೆ ಧಾರ್ಮಿಕ ಗ್ರಂಥಗಳು ಅವಶೇಷಗಳ ನಡುವೆ ಸ್ಪಷ್ಟವಾಗಿ ಗೋಚರಿಸುತ್ತವೆ.

1994ರಲ್ಲಿ ಮದರಸಾ ನಿರ್ವಾಹಕರು ನಕಲಿ ಕಂದಾಯ ದಾಖಲಾತಿ ಮಾಡಿ ಸರ್ಕಾರಿ ಜಮೀನನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ . ಮದರಸಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಪಾಲಿಕೆ ವ್ಯಾಪ್ತಿಯಲ್ಲಿ ಅಸಂಖ್ಯಾತ ಅತಿಕ್ರಮಣಗಳಿದ್ದು, ಅಧಿಕಾರಿಗಳು ಕೇವಲ ಮುಸಲ್ಮಾನರ ಆಸ್ತಿಯನ್ನು ಶೋಧಿಸಿ ನೆಲಸಮ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

Join Whatsapp
Exit mobile version