Home ಟಾಪ್ ಸುದ್ದಿಗಳು ನೂಪುರ್ ಶರ್ಮಾ, ನವೀನ್ ಕುಮಾರ್ ಅವರ ಪ್ರಾಥಮಿಕ ಸದಸ್ಯತ್ವ ಅಮಾನತುಗೊಳಿಸಿದ ಬಿಜೆಪಿ

ನೂಪುರ್ ಶರ್ಮಾ, ನವೀನ್ ಕುಮಾರ್ ಅವರ ಪ್ರಾಥಮಿಕ ಸದಸ್ಯತ್ವ ಅಮಾನತುಗೊಳಿಸಿದ ಬಿಜೆಪಿ

ನವದೆಹಲಿ: ಪ್ರವಾದಿ ಪೈಗಂಬರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮತ್ತು ದೆಹಲಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬಿಜೆಪಿ ಇಂದು ಅಮಾನತುಗೊಳಿಸಿದೆ.

ನೂಪುರ್ ಶರ್ಮಾ ಅವರಿಗೆ ಪತ್ರ ಬರೆದಿರುವ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್, ನಿಮ್ಮ ಹೇಳಿಕೆಯು ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾಗಿರುವುದರಿಂದಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಿಮ್ಮ ಹೇಳಿಕೆಯು ಬಿಜೆಪಿಯ ಸಂವಿಧಾನದ ನಿಯಮ 10 (ಎ) ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಠಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Join Whatsapp
Exit mobile version