Home ಟಾಪ್ ಸುದ್ದಿಗಳು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡಬೇಕಿತ್ತು: ಸಂಸದ ರಮೇಶ್ ಜಿಗಜಿಣಿಗಿ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡಬೇಕಿತ್ತು: ಸಂಸದ ರಮೇಶ್ ಜಿಗಜಿಣಿಗಿ

ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರನ್ನು ನೇಮಕ ಮಾಡಬೇಕಿತ್ತು ಎಂದು ಸಂಸದ ರಮೇಶ್ ಜಿಗಜಿಣಗಿ ಅಸಮಾಧಾನ ಹೊರಹಾಕಿದ್ದಾರೆ.


ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸೆಂಬ್ಲಿಯಲ್ಲೂ ನೋಡಿದ್ದೇವೆ ಲೋಕಸಭೆಯಲ್ಲೂ ನೋಡಿದ್ದೇವೆ. ಅಸೆಂಬ್ಲಿಯಲ್ಲಿ ದೊಡ್ಡ ದೊಡ್ಡ ಗೌಡರು ಸಾಹುಕಾರರುಗಳು ಬಂದರು. ಅವರ ಪರವಾಗಿ ನಾವು ಕೈ ಎತ್ತುತ್ತಲೇ ಇದ್ದೇವೆ. ಕಳೆದ 75 ವರ್ಷಗಳಿಂದ ನಾವು ಕೈ ಎತ್ತಿಕೊಂಡು ಬಂದಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.


ನಾವು ದಲಿತರು ನಮಗಾಗಿ ಈ ಜೀವನದಲ್ಲಿ ಯಾರು ಕೈ ಎತ್ತಿಲ್ಲ. ಇದು ಬಹಳ ದುಃಖದ ಸಂಗತಿ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರನ್ನು ನಾವಂತೂ ನೇಮಕ ಮಾಡಿಲ್ಲ. ಪಕ್ಷದ ಹಿರಿಯರು ಯಾವ ಯಾವುದೋ ಕಾರಣಕ್ಕೆ ಮಾಡಿದ್ದಾರೆ ಎಂದರು.

Join Whatsapp
Exit mobile version