Home ಟಾಪ್ ಸುದ್ದಿಗಳು ಬಿಜೆಪಿಯವರು ಮೊದಲು ಈಶ್ವರಪ್ಪ, ಅನಂತ್ ಕುಮಾರ್ ಗೆ ಗುಂಡಿಕ್ಕಲಿ: ಚಲುವರಾಯಸ್ವಾಮಿ

ಬಿಜೆಪಿಯವರು ಮೊದಲು ಈಶ್ವರಪ್ಪ, ಅನಂತ್ ಕುಮಾರ್ ಗೆ ಗುಂಡಿಕ್ಕಲಿ: ಚಲುವರಾಯಸ್ವಾಮಿ

ಮಂಡ್ಯ: ದೇಶ ವಿಭಜನೆಯ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂಬ ಕೆಎಸ್.ಈಶ್ವರಪ್ಪ ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ.


ಕೆಆರ್ ಪೇಟೆಯಲ್ಲಿ ಮಾತನಾಡಿದ ಅವರು ‘ಬಿಜೆಪಿಯವರು ಮೊದಲು ಈಶ್ವರಪ್ಪ ಹಾಗೂ ಅನಂತ್ ಕುಮಾರ್ ಗೆ ಗುಂಡಿಕ್ಕಲಿ ಎಂದಿದ್ದಾರೆ. ಕೇಸರಿ ಧ್ವಜವನ್ನ ರಾಷ್ಟ್ರ ಧ್ವಜ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದರೆ. ಇತ್ತ ಸಂವಿಧಾನ ಬದಲಾಯಿಸಬೇಕು ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಅವರ ಪಾರ್ಟಿಯವರು ಅವರಿಗೆ ಗುಂಡಿಕ್ಕಲಿ ಅಮೇಲೆ ನೋಡೋಣ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರಂತೆ ಕಾಂಗ್ರೆಸ್ ಶಾಸಕರು, ಸಂಸದರು ರಾಷ್ಟ್ರ ಸಂವಿಧಾನಕ್ಕೆ ಅವಮಾನ ಮಾಡಿಲ್ಲ. ರಾಜ್ಯಕ್ಕೆ ಆದ ಆರ್ಥಿಕ ಅನ್ಯಾಯದ ಬಗ್ಗೆ ಡಿಕೆ ಸುರೇಶ್ ಮಾತನಾಡಿದ್ದಾರೆ. ಅದನ್ನು ತಿಳಿದುಕೊಳ್ಳಲಾಗದೆ ಮಾತನಾಡಿದ ಈಶ್ವರಪ್ಪರ ಮೆದುಳಿಗೂ, ನಾಲಿಗೆಗೂ ಕನೆಕ್ಷನ್ ಕಟ್ ಆಗಿದೆ. ಆದ್ದರಿಂದ ಈಶ್ವರಪ್ಪಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ರಾಷ್ಟ್ರ, ರಾಜ್ಯ ಹಿತ ಕಾಯುವ ಪ್ರಶ್ನೆಗೆ ಉತ್ತರ ಕೊಡ್ತೀನಿ. ರಾಜಕಾರಣಕ್ಕಾಗಿ ನಾಲಿಗೆ ಹರಿಬಿಟ್ಟರೆ ಉತ್ತರ ಕೊಡಲ್ಲ ಎಂದರು.


ಇದೇ ವೇಳೆ ಸುಮಲತಾ-ಬಿಜೆಪಿ ವರಿಷ್ಠರ ಭೇಟಿ ವಿಚಾರ, ‘ಸುಮಲತಾ ಅವರು ಬಿಜೆಪಿ ಟಿಕೆಟ್ ಕೇಳುತ್ತಿರುವುದು ಕನ್ಫರ್ಮ್ ಆಯ್ತಲ್ವಾ?, ಸುಮಲತಾ ಬಿಜೆಪಿಯಲ್ಲಿರೋದು ಖಚಿತವಾಗಿದೆ. ಕಾಂಗ್ರೆಸ್ಗೆ ಅವರನ್ನ ಯಾರು ಕರೆದರೂ ಎಂದು ಸುಮಲತಾ ಹೇಳಬೇಕು. ಅವರು ಕಾಂಗ್ರೆಸ್ಗೆ ಹೋಗ್ತಾರೆ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಇದಕ್ಕೂ ಅವರಿಗೂ ಸಂಬಂಧ ಇಲ್ಲ. ಬಿಜೆಪಿ ಬೆಂಬಲಿತ ಸಂಸದೆ ಸುಮಲತಾ. ಈಗ ಬಿಜೆಪಿ ಟಿಕೆಟ್ ಕೇಳಿದ್ದಾರೆ. ಅವರ ಬಗ್ಗೆ ನಾವು ಮಾತನಾಡುವುದು ಸೂಕ್ತ ಅಲ್ಲ. ಅವರಿಗೆ ಕಾಂಗ್ರೆಸ್ ಬಾಗಿಲೂ ಮುಚ್ಚಿದೆಯಾ? ಇಲ್ವಾ? ಅವರನ್ನೇ ಕೇಳಿ.ಇನ್ನೊಂದು ವಾರದಲ್ಲಿ ಬಹುತೇಕ ಅಭ್ಯರ್ಥಿಗಳು ಫೈನಲ್ ಆಗುತ್ತಾರೆ ಎಂದರು.

Join Whatsapp
Exit mobile version