Home ಟಾಪ್ ಸುದ್ದಿಗಳು ಬಹುಮತ ಸಾಬೀತುಪಡಿಸಿದ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ

ಬಹುಮತ ಸಾಬೀತುಪಡಿಸಿದ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ

ಮುಂಬೈ: ನಿರೀಕ್ಷೆಯಂತೆ ಏಕನಾಥ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದೆ.

ವಿಧಾನಸಭೆ ಅಧಿವೇಶನ ಆರಂಭಗೊಂಡ ಬಳಿಕ ಬಹುಮತ ಸಾಬೀತುಪಡಿಸುವ ಕಲಾಪವನ್ನು ಸ್ಪೀಕರ್ ಕೈಗೆತ್ತಿಕೊಂಡರು. ಶಾಸಕರ ತಲೆ ಎಣಿಕೆ ನಡೆಸಿದಾಗ  ಸರ್ಕಾರದ ಪರವಾಗಿ 164 ಮತಗಳು ಲಭಿಸಿವೆ ಎಂದು ಘೋಷಿಸಲಾಯಿತು. ಇದರೊಂದಿಗೆ ಸರ್ಕಾರ ಬಹುಮತ ಸಾಬೀತುಪಡಿಸಿದೆ ಎಂದು ಸ್ಪೀಕರ್ ಪ್ರಕಟಿಸಿದರು.

ಈ ಮಧ್ಯೆ ಉದ್ಧವ್ ಠಾಕ್ರೆ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಸಂತೋಷ್ ಬಂಗೆರ್ ಅವರು ಸೋಮವಾರ ಮುಖ್ಯಮಂತ್ರಿ ಶಿಂಧೆ ಬಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

Join Whatsapp
Exit mobile version