ಧಾರ್ಮಿಕ ದಲ್ಲಾಳಿಗಳಾದ ಬಿಜೆಪಿ, ಆರೆಸ್ಸೆಸ್ ನವರು ನಕಲಿ ಹಿಂದುಗಳು : ರಾಹುಲ್ ಗಾಂಧಿ ವಾಗ್ದಾಳಿ

Prasthutha|

ನವದೆಹಲಿ: ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸುವ ಬಿಜೆಪಿ ಮತ್ತು ಆರೆಸ್ಸೆಸ್ ನವರು ನಕಲಿ ಹಿಂದುಗಳು ಎಂದು ರಾಹುಲ್ ಗಾಂಧಿ ಬುಧವಾರ ತೀವ್ರ ವಾಗ್ದಾಳಿ ನಡೆಸಿದರು.

- Advertisement -

ಅವರು ಅಖಿಲ ಭಾರತೀಯ ಮಹಿಳಾ ಕಾಂಗ್ರೆಸ್ ಸ್ಥಾಪನೆಯ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಕಾಂಗ್ರೆಸ್ ನ ಸಿದ್ಧಾಂತ, ಬಿಜೆಪಿ ಮತ್ತು ಆರೆಸ್ಸೆಸ್ ನ ಸಿದ್ಧಾಂತಕ್ಕೆ ತದ್ವಿರುದ್ಧವಾಗಿದೆ. ಇವೆರಡರಲ್ಲಿ ಕಾಂಗ್ರೆಸ್ ಸಿದ್ಧಾಂತ ಮಾತ್ರ ಪರಿಪೂರ್ಣವಾಗಿ ದೇಶವನ್ನು ಆಳಬಲ್ಲದು ಎಂದು ಅವರು ಹೇಳಿದರು.

ಲಕ್ಷ್ಮಿ ದೇವಿಯ ಶಕ್ತಿ ಒಬ್ಬರ ಗುರಿಯನ್ನು ಸಾಧಿಸಲು ನೆರವಾಗುತ್ತದೆ ಮತ್ತು ದುರ್ಗಾ ದೇವಿಯು ರಕ್ಷಣೆಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

- Advertisement -

ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ರೋಶಿತರಾಗಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ, ಆರೆಸ್ಸೆಸ್ ನವರು ಯಾವ ರೀತಿಯ ಹಿಂದುಗಳು?. ತಮ್ಮ ರಾಜಕೀಯ ಲಾಭಕ್ಕಾಗಿ ಹಿಂದು ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುವ ಅವರು, ದಲ್ಲಾಳಿ ಮತ್ತು ನಕಲಿ ಹಿಂದುಗಳು ಎಂದು ರಾಹುಲ್ ಗಾಂಧಿ ಗುಡುಗಿದರು.

Join Whatsapp