ಕೊಲ್ಕತಾ : ಪಶ್ಚಿಮ ಬಂಗಾಳದ ಮುರ್ಚಿದಾಬಾದ್ ನಲ್ಲಿ ಇಂದು ಬಿಜೆಪಿಯ ರಥಯಾತ್ರೆಯನ್ನು ಪೊಲೀಸರು ತಡೆದಿದ್ದಾರೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಬಿಜೆಪಿಯ ರಥಯಾತ್ರೆ ಸಾಗುವುದಕ್ಕೆ ಪೊಲೀಸರು ಅಡ್ಡಿಪಡಿಸಿದ್ದಾರೆ.
ನಾದಿಯಾ ಜಿಲ್ಲೆಯಲ್ಲಿ ಫೆ.6ರಂದು ಬಿಜೆಪಿ ರಥಯಾತ್ರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದ್ದರ. ಅದು ಫೆ.7ರಂದು ನಕಾಸಿಪುರ ಮಾರ್ಗವಾಗಿ ಮುರ್ಷಿದಾಬಾದ್ ಪ್ರವೇಶಿಸಿತ್ತು. ಆದರೆ, ಈ ವೇಳೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ರಥಯಾತ್ರೆ ನಡೆಸುವುದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಪರ್ಯಾಯ ಮಾರ್ಗದಲ್ಲಿ ರಥಯಾತ್ರೆ ಸಾಗಿತು ಎಂದು ವರದಿಗಳಾಗಿವೆ.
ರಥಯಾತ್ರೆ ಮಾರ್ಗದ ಬಗ್ಗೆ ಮೊದಲೇ ತಿಳಿಸಿದ್ದೆವು. ಆದರೂ ಪೊಲೀಸರು ತಡೆಯೊಡ್ಡಿದ್ದಾರೆ ಎಂದು ಬಿಜೆಪಿ ಮುಖಂಡರು ಆಪಾದಿಸಿದ್ದಾರೆ.