Home ಟಾಪ್ ಸುದ್ದಿಗಳು ಬಿಜೆಪಿಯಿಂದ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ; ಅಂಕಿಅಂಶಗಳ ಬಹಿರಂಗಕ್ಕೆ ಖರ್ಗೆ ಆಗ್ರಹ

ಬಿಜೆಪಿಯಿಂದ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ; ಅಂಕಿಅಂಶಗಳ ಬಹಿರಂಗಕ್ಕೆ ಖರ್ಗೆ ಆಗ್ರಹ

ನವದೆಹಲಿ: ಬಿಜೆಪಿ ಸರ್ಕಾರ ಪ್ರತಿವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದೆ. ಆದರೆ ಇದುವರೆಗೆ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದರ ಬಗ್ಗೆ ಅಂಕಿಅಂಶಗಳನ್ನು ಬಹಿರಂಗಪಡಿಸುವಂತೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿಂದು ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಮಾತ್ರವಲ್ಲ ಕೇಂದ್ರ ಸರ್ಕಾರ ಸೃಷ್ಟಿಸಿರುವ ಉದ್ಯೋಗದ ಕುರಿತು ಅಂಕಿಅಂಶಗಳನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರು.

ಭಾರತ ಆರ್ಥಿಕತೆ ನೆಲಕಚ್ಚಿರುವುದನ್ನು ಮುಚ್ಚಿಟ್ಟುಕೊಂಡು ಭಾರತವನ್ನು ವಿಶ್ವದ ಅತ್ಯಂತ ವೇಗವಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ರಾಷ್ಟ್ರಪತಿಯವರ ಮೂಲಕ ಸರ್ಕಾರ ಸುಳ್ಳು ಹೇಳಿಕೆ ನೀಡಿದೆ ಎಂದು ದೂರಿದರು.

Join Whatsapp
Exit mobile version