Home ಟಾಪ್ ಸುದ್ದಿಗಳು ಮಹಿಳಾ ದಿನಾಚರಣೆಗೆ ಶುಭಕೋರಿ ನಗೆಪಾಟಲಿಗೀಡಾದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

ಮಹಿಳಾ ದಿನಾಚರಣೆಗೆ ಶುಭಕೋರಿ ನಗೆಪಾಟಲಿಗೀಡಾದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

ಚೆನ್ನೈ: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ, ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಮಾಡಿರುವ ಟ್ವೀಟ್‌ ವ್ಯಾಪಕ ನಗೆಪಾಟಲಿಗೀಡಾಗಿದೆ.

ಅಣ್ಣಾಮಲೈ ಮಾಡಿರುವ ಟ್ವೀಟ್‌ನಲ್ಲಿ ನರೇಂದ್ರ ಮೋದಿ, ಜೆಪಿ ನಡ್ಡಾ ಹಾಗೂ ಅಣ್ಣಾಮಲೈ ಅವರ ಚಿತ್ರಗಳು ಮಾತ್ರ ರಾರಾಜಿಸುತ್ತಿದ್ದು ಮಹಿಳಾ ದಿನಾಚರಣೆಗೆ ಯಾವುದೇ ಮಹಿಳೆಯರ ಫೋಟೊಗಳನ್ನು ಅಳವಡಿಸದೇ ಶುಭಾಶಯ ಸಲ್ಲಿಸಿರುವುದು ಸದ್ಯ ತಮಿಳುನಾಡಿನಾದ್ಯಂತ ವ್ಯಾಪಕ ಟ್ರೋಲ್‌ ಗೆ ಗುರಿಯಾಗಿದೆ.

“ನಮ್ಮ ಸ್ತ್ರೀಶಕ್ತಿ ಹೊಂದಿರುವ ಬಲ, ಅವರು ತೋರಿಸುವ ಕಾಳಜಿ, ಪ್ರತಿಯೊಂದು ಅಂಶದಲ್ಲೂ ಅವರು ಹೊಂದಿರುವ ಬಹು ಆಯಾಮದ ವಿಧಾನವು ನಮ್ಮ ಮಹಿಳೆಯರನ್ನು ಎದ್ದು ಕಾಣುವಂತೆ ಮಾಡುತ್ತದೆ. ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಿದ್ದಕ್ಕಾಗಿ ನಮ್ಮ ಎಲ್ಲಾ ತಾಯಿ ಮತ್ತು ಸಹೋದರಿಯರಿಗೆ ಧನ್ಯವಾದಗಳು! ಮಹಿಳಾ ದಿನಾಚರಣೆಯ ಶುಭಾಶಯಗಳು!” ಎಂಬ ಅಣ್ಣಾಮಲೈ ಅವರ ಟ್ವೀಟ್‌ ನಲ್ಲಿ ಯಾವುದೇ ಮಹಿಳೆಯರ ಫೋಟೋ ಇಲ್ಲದಿರುವುದು ಹಾಸ್ಯಾಸ್ಪದವಾಗಿದೆ.

“ಮಹಿಳೆಯರಿಲ್ಲದ ಫೋಟೊವನ್ನು ಪ್ರಕಟಿಸುವ ಮೂಲಕ ಅಣ್ಣಾಮಲೈ ಮಹಿಳೆಯರಿಗೆ ಭಾರೀ ಗೌರವ ಸಲ್ಲಿಸಿದ್ದಾರೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಕುಹಕವಾಡಿದ್ದಾರೆ.

Join Whatsapp
Exit mobile version