Home ಟಾಪ್ ಸುದ್ದಿಗಳು ಪ್ರಧಾನಿ ಸಾಧನೆಗಳ ವೀಡಿಯೋದಲ್ಲಿ ಅಮೆರಿಕದ ಬಹು ಮಹಡಿಯ ಕಟ್ಟಡ|ಮತ್ತೊಮ್ಮೆ ಬೆತ್ತಲಾದ ಬಿಜೆಪಿ !

ಪ್ರಧಾನಿ ಸಾಧನೆಗಳ ವೀಡಿಯೋದಲ್ಲಿ ಅಮೆರಿಕದ ಬಹು ಮಹಡಿಯ ಕಟ್ಟಡ|ಮತ್ತೊಮ್ಮೆ ಬೆತ್ತಲಾದ ಬಿಜೆಪಿ !

ನವದೆಹಲಿ: ಸೆ.17 ರಂದು ಭಾರತದ ಪ್ರಧಾನಿ ಮೋದಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರದ ಬಹುತೇಕ ಜನರು ರಾಷ್ಟ್ರೀಯ ನಿರೋಧ್ಯೋಗ ದಿನಾಚರಣೆಯನ್ನಾಗಿ ಆಚರಿಸಿದ್ದರು. ಈ ಮಧ್ಯೆ ಬಿಜೆಪಿ ಮತ್ತು ಬೆಂಬಲಿಗರು ತಮ್ಮದೇ ಶೈಲಿಯಲ್ಲಿ ಆ ದಿನವನ್ನು ಆಚರಣೆ ನಡೆಸಿದೆ. ಪ್ರಧಾನಿ ಮೋದಿಯ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಅವರ ಸಾಧನೆಗಳನ್ನು ವೀಡಿಯೋ ತುಣುಕಿನ ಮೂಲಕ ವೈರಲ್ ಮಾಡಿ ಜನತೆಯ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು.

ಪ್ರಸಕ್ತ ಮೋದಿಯ ಸಾಧನೆಗಳು ಬಿಂಬಿಸುವ ವೀಡಿಯೋದಲ್ಲಿ ಅಮೆರಿಕದ ಲಾಸ್ ಏಜಂಲೀಸ್ ನ ಬಹುಮಹಡಿಯ ಕಟ್ಟಡವನ್ನು ಮುದ್ರಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ನೆಟ್ಟಿಗರಿಂದ ಛೀಮಾರಿಕ್ಕೊಳಗಾಗಿದೆ.

https://twitter.com/BJP4India/status/1438676578696060929

ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಾಧನೆಯನ್ನು ಬಿಂಬಿಸುವ ಭರದಲ್ಲಿ ಪಶ್ಚಿಮ ಬಂಗಾಳದ ಫ್ಲೈ-ಓವರ್ ಅನ್ನು ತೋರಿಸಿ ಇದು ಉತ್ತರಪ್ರದೇಶದಲ್ಲಿ ಯೋಗಿ ಸಾಧನೆಯೆಂದು ತೋರಿಸುವ ವೀಡಿಯೋವೊಂದನ್ನು ಬಿಡುಗಡೆಗೊಳಿಸಲಾಗಿತ್ತು. ಇದರ ಫ್ಯಾಕ್ಟ್ ಪತ್ತೆಹಚ್ಚಿದ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಇದರ ಅಸಲಿಯತ್ತನ್ನು ಬಿತ್ತರಿಸಿದಾಗ ಯೋಗಿ ನಗೆಪಾಟಾಲಿಗೀಡಾಗಿದ್ದರು.

ಪ್ರಸಕ್ತ ಬಿಜೆಪಿ ಬಿಡುಗಡೆಗೊಳಿಸಿದ ವೀಡಿಯೋದಲ್ಲಿ 21 ನೇ ಶತಮಾನದಲ್ಲಿ ಭಾರತದ ಅಭಿವೃದ್ದಿಯಲ್ಲಿ ಪ್ರಧಾನಿ ಮೋದಿ ಬಹಳಷ್ಟು ಸುಧಾರಣೆ ಮಾಡಿದ್ದಾರೆ ಎಂದು ಬಿಂಬಿಸಿತ್ತು. ಆದರೆ ವೀಡಿಯೋ ತುಣುಕಿನ ಕೊನೆಯಲ್ಲಿ ವೈಭವೀಕರಿಸುವ ಬರದಲ್ಲಿ ಅಮೆರಿಕ ಲಾಸ್ ಏಜಂಲೀಸ್ ನಲ್ಲಿರುವ ಬಹುಮಹಡಿ ಕಟ್ಟಡವನ್ನು ಮುದ್ರಿಸಿ ಬಿಜೆಪಿ ಸಾರ್ವಜನಿಕರ ಮುಂದೆ ಬೆತ್ತಲಾಗಿದೆ.

Join Whatsapp
Exit mobile version