Home ಟಾಪ್ ಸುದ್ದಿಗಳು ಕೇರಳದಲ್ಲಿ ಮೊಟ್ಟ ಮೊದಲ ಖಾತೆ ತೆರೆದ ಬಿಜೆಪಿ: ತ್ರಿಶೂರ್‌ ಕ್ಷೇತ್ರದಿಂದ ನಟ ಸುರೇಶ್‌ ಗೋಪಿ ಭರ್ಜರಿ...

ಕೇರಳದಲ್ಲಿ ಮೊಟ್ಟ ಮೊದಲ ಖಾತೆ ತೆರೆದ ಬಿಜೆಪಿ: ತ್ರಿಶೂರ್‌ ಕ್ಷೇತ್ರದಿಂದ ನಟ ಸುರೇಶ್‌ ಗೋಪಿ ಭರ್ಜರಿ ಜಯ

ತ್ರಿಶೂರ್: ಕೇರಳದಲ್ಲಿ ಬಿಜೆಪಿ ಮೊದಲ ಖಾತೆ ತೆರೆದಿದೆ. ತ್ರಿಶೂರ್ ಕ್ಷೇತ್ರದಿದ ಬಿಜೆಪಿ ಅಭ್ಯರ್ಥಿ, ಚಿತ್ರನಟ ಸುರೇಶ್ ಗೋಪಿ ಜಯ ಸಾಧಿಸಿದ್ದಾರೆ. ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಸುರೇಶ್ ಗೋಪಿ ಬರೊಬ್ಬರಿ 70,000 ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು, ಇದು ಕೇರಳದಲ್ಲಿ ಬಿಜೆಪಿಯ ಮೊಟ್ಟ ಮೊದಲ ಗೆಲುವಾಗಿದೆ. ಅವರು ಸಿಪಿಐಯ ವಿ.ಎಸ್‌. ಸುನೀಲ್‌ ಕುಮಾರ್‌ ಅವರನ್ನು ಸೋಲಿಸಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುರಳೀಧರನ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಸುರೇಶ್ ಗೋಪಿ ಸತತ ಎರಡನೇ ಬಾರಿಗೆ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. 2019 ರಲ್ಲಿ,ಅವರು ಕಾಂಗ್ರೆಸ್ ಅಭ್ಯರ್ಥಿ ಟಿಎನ್ ಪ್ರತಾಪನ್ ಅವರಿಂದ 1,21,267 ಮತಗಳಿಂದ ಸೋತು ಮೂರನೇ ಸ್ಥಾನ ಪಡೆದಿದ್ದರು.

Join Whatsapp
Exit mobile version