ರಾಜ್ಯ ಕಚೇರಿಯನ್ನು ಮುಚ್ಚಿದ ಉತ್ತರಾಖಂಡ ಬಿಜೆಪಿ !

Prasthutha|

ಡೆಹರಾಡೂನ್: ಕೋವಿಡ್ -19 ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದಾಗಿ ಬಿಜೆಪಿಯ ಉತ್ತರಾಖಂಡದ ರಾಜ್ಯ ಕಚೇರಿಯನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ.

ಸೆಪ್ಟಂಬರ್ 6ರ ನಂತರ ಸ್ಯಾನಿಟೈಸರ್ ಸಿಂಪಡನೆ ಮಾಡಿ ಕಛೇರಿಯನ್ನು ಮತ್ತೆ ತೆರೆಯುತ್ತೇವೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಮುಖ್ಯಸ್ಥರು ತಿಳಿಸಿದ್ದಾರೆ. ಸೆಪ್ಟೆಂಬರ್ 2ರ ವರೆಗೆ ಕಚೇರಿಯನ್ನು ಮುಚ್ಚಲು ನಿರ್ಧರಿಸಲಾಗಿತ್ತಾದರೂ, ನಂತರ ಆರೋಗ್ಯ ಇಲಾಖೆಯ ಮುಖ್ಯಸ್ಥರ ಶಿಫಾರಸಿನ ಮೇರೆಗೆ ಅದನ್ನು 6ರ ವರೆಗೆ ವಿಸ್ತರಿಸಲಾಯಿತು. ಕಚೇರಿಯನ್ನು ಆಗಸ್ಟ್ 30ರಂದು ಮುಚ್ಚಲಾಗಿತ್ತು.

- Advertisement -

ಉತ್ತರಾಖಂಡದಲ್ಲಿ ಈಗ 6,442 ಪ್ರಕರಣಗಳಿವೆ. ಈ ವರೆಗೆ ರಾಜ್ಯದಲ್ಲಿ 14,501 ಜನರು ಚೇತರಿಸಿಕೊಂಡಿದ್ದಾರೆ.291 ಜನರು ಸಾವನ್ನಪ್ಪಿದ್ದಾರೆ.

- Advertisement -