Home ಟಾಪ್ ಸುದ್ದಿಗಳು 15 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಭ್ರಷ್ಟಾಚಾರ ಪ್ರಕರಣವಾದರೆ ಮಾತ್ರ ನನ್ನ ಬಳಿ ಬನ್ನಿ: ಬಿಜೆಪಿ ಸಂಸದ

15 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಭ್ರಷ್ಟಾಚಾರ ಪ್ರಕರಣವಾದರೆ ಮಾತ್ರ ನನ್ನ ಬಳಿ ಬನ್ನಿ: ಬಿಜೆಪಿ ಸಂಸದ

ಭೋಪಾಲ್: ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಭ್ರಷ್ಟಾಚಾರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, 15 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಭ್ರಷ್ಟಾಚಾರವಾದರೆ ಮಾತ್ರ ತನ್ನನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದ್ದಾರೆ.

‘ಇಂದಿನ ಸವಾಲುಗಳನ್ನು ಎದುರಿಸುವಲ್ಲಿ ಮಾಧ್ಯಮಗಳ ಪಾತ್ರ’ ಎಂಬ ವಿಚಾರ ಸಂಕಿರಣದಲ್ಲಿ ಮಧ್ಯಪ್ರದೇಶದ ರೇವಾ ಸಂಸದ ಜನಾರ್ದನ್ ಮಿಶ್ರಾ ಮಾತನಾಡುತ್ತಿದ್ದರು. ಸಂಸದರ ಈ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲಾಗಿದೆ.

“ಅನೇಕ ಜನರು ಸರಪಂಚ್ ರ(ಗ್ರಾಮದ ಮುಖ್ಯಸ್ಥರು) ಭ್ರಷ್ಟಾಚಾರದ ಬಗ್ಗೆ ಕಳವಳದಿಂದ ನನ್ನನ್ನು ಸಂಪರ್ಕಿಸುತ್ತಾರೆ. 15 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಪ್ರಕರಣವಾದರೆ ಮಾತ್ರ ನನ್ನ ಬಳಿ ಬನ್ನಿ ಎಂದು ನಾನು ಅವರಿಗೆ ಹೇಳುತ್ತೇನೆ” ಎಂದು ಸಂಸದರು ಹೇಳಿದ್ದಾರೆ.

Join Whatsapp
Exit mobile version