Home ಟಾಪ್ ಸುದ್ದಿಗಳು ಗುಜರಾತ್ ಸೇತುವೆ ದುರಂತದಲ್ಲಿ 12 ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ

ಗುಜರಾತ್ ಸೇತುವೆ ದುರಂತದಲ್ಲಿ 12 ಸಂಬಂಧಿಕರನ್ನು ಕಳೆದುಕೊಂಡ ಬಿಜೆಪಿ ಸಂಸದ

ಗುಜರಾತ್: ಪಶ್ಚಿಮ ಗುಜರಾತ್ ನ ಮೊರ್ಬಿ ತೂಗು ಸೇತುವೆ ದುರಂತದಲ್ಲಿ ಇದುವರೆಗೆ 141ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಈ ದುರಂತದಲ್ಲಿ ಬಿಜೆಪಿ ಸಂಸದ ತಮ್ಮ 12 ಜನ ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ.


ಈ ಬಗ್ಗೆ ಮಾತನಾಡಿದ ರಾಜ್ಕೋಟ್ ಬಿಜೆಪಿ ಸಂಸದ ಮೋಹನ್ಭಾಯ್ ಕುಂದರಿಯಾ, ಈ ಘಟನೆ ಅತ್ಯಂತ ದುಃಖಕರವಾಗಿದೆ. ನಾನು ನಿನ್ನೆ ಸಂಜೆಯಿಂದ ಇಲ್ಲಿದ್ದೇನೆ. ಇಲ್ಲಿಯವರೆಗೆ ನೂರಾರು ಜನರ ಶವಗಳು ಪತ್ತೆಯಾಗಿವೆ. ಈ ದುರಂತದಲ್ಲಿ ನಮ್ಮ ಸಂಬಂಧಿಕರು ಸಹ ಸಾವನ್ನಪ್ಪಿದ್ದಾರೆ. ನನ್ನ ಸೋದರ ಮಾವನ ನಾಲ್ಕು ಹೆಣ್ಮಕ್ಕಳು, 3 ಅಳಿಯಂದಿರು ಮತ್ತು 5 ಮಕ್ಕಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.


ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡುವುದಿಲ್ಲ. ಈ ಅಪಘಾತದ ಸತ್ಯಾಸತ್ಯತೆ ಶೇ.100 ಹೊರಬರಲಿದೆ ಎಂದರು.

Join Whatsapp
Exit mobile version