Home ಟಾಪ್ ಸುದ್ದಿಗಳು ಸಿ ಎಂ ಕಚೇರಿಯಿಂದ ಪತ್ರಕರ್ತರಿಗೆ ನಗದು ಉಡುಗೊರೆ : ಸೂಕ್ತ ತನಿಖೆಗೆ ಬಿಜೆಪಿ ಎಮ್ ಎಲ್...

ಸಿ ಎಂ ಕಚೇರಿಯಿಂದ ಪತ್ರಕರ್ತರಿಗೆ ನಗದು ಉಡುಗೊರೆ : ಸೂಕ್ತ ತನಿಖೆಗೆ ಬಿಜೆಪಿ ಎಮ್ ಎಲ್ ಸಿ ಎಚ್ ವಿಶ್ವನಾಥ್ ಆಗ್ರಹ

ಮೈಸೂರು: ಮುಖ್ಯಮಂತ್ರಿ ಕಛೇರಿಯಿಂದ ದೀಪಾವಳಿ ಪ್ರಯುಕ್ತ ಕೆಲವು ಪತ್ರಕರ್ತರಿಗೆ ಹಣದ ಕಂತೆಯ ಉಡುಗೊರೆಯನ್ನು ನೀಡಿರುವುದರ ಕುರಿತು ಸೂಕ್ತ ತನಿಖೆಗೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎ ಎಚ್ ವಿಶ್ವನಾಥ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ,ನಗದು ಉಡುಗೊರೆ ಕೊಟ್ಟಿರುವುದು ಮಾಧ್ಯಮ ಲೋಕಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಜತೆ ಹಣ ನೀಡಿರುವುದು ಒಪ್ಪಲಸಾಧ್ಯ. ಈ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಬೇಕು. ಅವರ ಮಾಧ್ಯಮ ಕಾರ್ಯದರ್ಶಿಯನ್ನು ಕೂಡಲೇ ಹೊರ ಹಾಕಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕನ್ನಡದ ಮಾಧ್ಯಮಗಳಿಗೆ ಅದರದ್ದೇ ಆದ ಗೌರವ, ಪ್ರತಿಷ್ಠೆ ಇದೆ. ಈ ಬಗೆಯಲ್ಲಿ ಭ್ರಷ್ಟಾಚಾರಕ್ಕೆ ಅನುವು ಮಾಡಿ ಕೊಡುವುದು ಸಮಂಜಸವಲ್ಲ. ಪತ್ರಕರ್ತರಿಗೆ ಆಮಿಷ ಒಡ್ಡಿರುವುದನ್ನು ಗಮನಿಸಿದರೆ ಮುಂಬರುವ ಚುನಾವಣೆಗೆ ಈಗಲೇ ಹಣ ಹೂಡಿಕೆ ಆರಂಭವಾಯಿತೇ ಎಂಬ ಪ್ರಶ್ನೆ ಮೂಡಿದೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Join Whatsapp
Exit mobile version