ಬಿಜೆಪಿ ಶಾಸಕನ ಪತ್ನಿ ನಾಪತ್ತೆ: ಹುಡುಕಾಟಕ್ಕೆ 6 ಪೊಲೀಸರ ತಂಡ ರಚನೆ

Prasthutha|

- Advertisement -

ಸುಲ್ತಾನ್‌ಪುರ: ಬಿಜೆಪಿ ಶಾಸಕರ ಪತ್ನಿಯೊಬ್ಬರು ನಿನ್ನೆ ಬೆಳಗ್ಗೆಯಿಂದ ನಾಪತ್ತೆಯಾಗಿದ್ದು, ಎಷ್ಪೇ ಹುಡುಕಿದರೂ ಡತ್ತೆಯಾಗದ ಕಾರಣ ಹುಡುಕಾಟಕ್ಕೆ 6 ಪೊಲೀಸರ ತಂಡಗಳನ್ನು ರಚಿಸಲಾಗಿದೆ.

ಉತ್ತರ ಪ್ರದೇಶದ ಸುಲ್ತಾನ್‌ಪುರದ ಲಂಬುವಾ ಕ್ಷೇತ್ರದ ಶಾಸಕ ಸೀತಾರಾಮ್ ವರ್ಮಾ ಪತ್ನಿ ಕಾಣೆಯಾಗಿದ್ದು, ಸುದೀರ್ಘ ಹುಡುಕಾಟದ ನಂತರವೂ ಪತ್ನಿ ಪತ್ತೆಯಾಗದ ಕಾರಣ ಶಾಸಕ ಸೀತಾರಾಮ್ ವರ್ಮಾ ಗಾಜಿಪುರ ಪೊಲೀಸ್ ಠಾಣೆಯಲ್ಲಿ ತನ್ನ ಮಗನೊಂದಿಗೆ ಹೋಗಿ ಹೆಂಡತಿ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ‌. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪುಷ್ಪಾ ವರ್ಮಾ ಅವರ ಪತ್ತೆಗಾಗಿ ಆರು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ ಮತ್ತು ಅವರನ್ನು ವಿವಿಧ ಕಡೆಗಳಿಗೆ ಕಳುಹಿಸಿದ್ದಾರೆ.

- Advertisement -

ಉತ್ತರ ಪ್ರದೇಶದ ಇಂದಿರಾನಗರ ಸೆಕ್ಟರ್ ಎಂಟರಲ್ಲಿ ಶಾಸಕ ಸೀತಾರಾಮ್ ವರ್ಮಾ ಅವರ ಮನೆ ಇದೆ. ಅವರ ಪತ್ನಿ ಪುಷ್ಪಾ ವರ್ಮಾ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರ ಮಗ ಲೆಫ್ಟಿನೆಂಟ್ ಪಂಕಜ್ ಕುಮಾರ್ ಕೂಡ ತಾಯಿಯನ್ನು ಹುಡುಕಲು ಹೊರಟಿದ್ದಾರೆ. ಆದರೆ ತಾಯಿ ಪತ್ತೆಯಾಗಿರಲಿಲ್ಲ. ಬಳಿಕ ಗಾಜಿಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Join Whatsapp
Exit mobile version