ಮಹೋಬಾ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ತಂಬಾಕು ಜಗಿದು ಇಸ್ಪೀಟ್ ಆಡಿದ ವೀಡಿಯೋಗಳನ್ನು ಸಮಾಜವಾದಿ ಪಕ್ಷ ಬಿಡುಗಡೆ ಮಾಡಿದ್ದು, ಸಭೆಯ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ವೀಡಿಯೋದಲ್ಲಿ ಮಹೋಬಾದ ಬಿಜೆಪಿ ಶಾಸಕ ರಾಕೇಶ್ ಗೋಸ್ವಾಮಿ ತಮ್ಮ ಮೊಬೈಲ್ ನಲ್ಲಿ ಕಾರ್ಡ್-ಗೇಮ್ ಆಡುತ್ತಿರುವುದು ಕಂಡುಬಂದಿದೆ. ಮತ್ತೊಂದು ವೀಡಿಯೋದಲ್ಲಿ ಬಿಜೆಪಿಯ ಝಾನ್ಸಿ ಶಾಸಕ ರವಿ ಶರ್ಮಾ ಅವರು ಅಸೆಂಬ್ಲಿಯ ಮುಂಗಾರು ಅಧಿವೇಶನದಲ್ಲಿ ಕುಳಿತು ತಂಬಾಕು ಜಗಿಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗಳ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷ, ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರ ನೀಡದ ಬಿಜೆಪಿಯ ಶಾಸಕರು ವಿಧಾನಸಭೆಯ ಘನತೆ ಹಾಳು ಮಾಡುತ್ತಿದ್ದಾರೆ ಮತ್ತು ಅಸೆಂಬ್ಲಿಯನ್ನು ಮನರಂಜನಾ ಕೇಂದ್ರವನ್ನಾಗಿ ಮಾಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ಟೀಕಿಸಿದೆ.