Home ಟಾಪ್ ಸುದ್ದಿಗಳು ಬಜೆಟ್ ಅಧಿವೇಶನ: ಕೇಸರಿ ಶಾಲು ಧರಿಸಿ ಸದನಕ್ಕೆ ಬಂದ ಬಿಜೆಪಿ ಶಾಸಕರು

ಬಜೆಟ್ ಅಧಿವೇಶನ: ಕೇಸರಿ ಶಾಲು ಧರಿಸಿ ಸದನಕ್ಕೆ ಬಂದ ಬಿಜೆಪಿ ಶಾಸಕರು

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನ ಸೋಮವಾರ ಬೆಳಿಗ್ಗೆ 11ಕ್ಕೆ ಆರಂಭವಾಗಿದ್ದು, ಬಿಜೆಪಿ ಸದಸ್ಯರು ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದಾರೆ.

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 16 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಅಧಿವೇಶನ ಇಂದು (ಫೆ.12) ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು.

ಬಿಜೆಪಿಯ ಹಲವು ಸದಸ್ಯರು ಕೊರಳಿಗೆ ಕೇಸರಿ ಶಾಲು ಧರಿಸಿ ಸದನಕ್ಕೆ ಬಂದಿದ್ದಾರೆ. ಉಳಿದವರಿಗೆ ಸದನ ಪ್ರವೇಶಿಸುವ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿ ಸಿಬ್ಬಂದಿ ಕೇಸರಿ ಶಾಲುಗಳನ್ನು ವಿತರಿಸಿದರು.

Join Whatsapp
Exit mobile version