Home ಟಾಪ್ ಸುದ್ದಿಗಳು ಜೂಜು ಪ್ರಕರಣ ಸಾಬೀತು: ಬಿಜೆಪಿ ಶಾಸಕನಿಗೆ ಎರಡು ವರ್ಷ ಜೈಲು ಶಿಕ್ಷೆ

ಜೂಜು ಪ್ರಕರಣ ಸಾಬೀತು: ಬಿಜೆಪಿ ಶಾಸಕನಿಗೆ ಎರಡು ವರ್ಷ ಜೈಲು ಶಿಕ್ಷೆ

ಗುಜರಾತ್: ಜೂಜು ಪ್ರಕರಣವೊಂದರಲ್ಲಿ ಬಿಜೆಪಿ ಶಾಸಕನಿಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ಬಿಜೆಪಿ ಶಾಸಕ ಕೇಸರಿ ಸಿನ್ಹಾ ಸೋಲಂಕಿ ವಿರುದ್ಧ ಕಳೆದ ವರ್ಷ ರೆಸಾರ್ಟ್‌’ನಲ್ಲಿ ಜೂಜಾಟವಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಲರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪಂಚಮಹಲ್ ಜಿಲ್ಲೆಯ ಹಾಲೋಲ್ ಕೋರ್ಟ್, ಶಾಸಕ ಸೇರಿ ಇತರ 25 ಮಂದಿಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಜೈಲು ಶಿಕ್ಷೆಯೊಂದಿಗೆ ತಲಾ ₹ 3,000 ದಂಡವನ್ನು ಶಾಸಕ ಸೇರಿ ಇನ್ನಿತರರಿಗೆ ವಿಧಿಸಲಾಗಿದ್ದು, ಕಳೆದ ಜುಲೈನಲ್ಲಿ ಅಪರಾಧ ದಳದ ಪೊಲೀಸರು ಶಿವರಾಜ್‌ಪುರ್ ಬಳಿಯ ರೆಸಾರ್ಟ್‌ಗೆ ದಾಳಿ ನಡೆಸಿದ್ದರು. ಈ ವೇಳೆ ಜೂಜಿನಲ್ಲಿ ತೊಡಗಿದ್ದ ಖೇಡಾ ಜಿಲ್ಲೆಯ ಮಟರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸೋಲಂಕಿ ಮತ್ತು ನೇಪಾಳದ ನಾಲ್ಕು ಮಂದಿ ಸೇರಿ ಒಟ್ಟು 7 ಮಹಿಳೆಯರು ಸೇರಿದಂತೆ 25 ಜನರನ್ನು ಬಂಧಿಸಿದ್ದರು.

ಜೂಜಿಗೆ ಅವಕಾಶ ಮಾಡಿಕೊಟ್ಟ ರೆಸಾರ್ಟ್ ಪರವಾನಗಿಯನ್ನು ನ್ಯಾಯಾಲಯ ರದ್ದುಗೊಳಿಸಿದೆ.

Join Whatsapp
Exit mobile version