Home ಕರಾವಳಿ ಸರಕಾರಿ ಸವಲತ್ತುಗಳಲ್ಲಿ ತಾರತಮ್ಯ ನಡೆಸುತ್ತಿರುವ ಬಿಜೆಪಿ ಸಚಿವ ಅಂಗಾರ ನಡೆ ಖಂಡನಾರ್ಹ: ಎಸ್‌ ಡಿಪಿಐ

ಸರಕಾರಿ ಸವಲತ್ತುಗಳಲ್ಲಿ ತಾರತಮ್ಯ ನಡೆಸುತ್ತಿರುವ ಬಿಜೆಪಿ ಸಚಿವ ಅಂಗಾರ ನಡೆ ಖಂಡನಾರ್ಹ: ಎಸ್‌ ಡಿಪಿಐ

ಸುಳ್ಯ: ಸರ್ಕಾರಿ ಸವಲತ್ತುಗಳನ್ನು ನೀಡುವುದರಲ್ಲಿ ಸಚಿವ ಅಂಗಾರ ರವರು ತಾರತಮ್ಯ ನಡೆಸಿರುವ ಆಡಿಯೋ ವೊಂದು ವೈರಲ್ ಆಗಿದ್ದು, ಮೇಲ್ನೋಟಕ್ಕೆ ಶಾಸಕರು ತಾರತಮ್ಯ ನಡೆಸುತ್ತಿರುವುದು ಸ್ಪಷ್ಟವಾಗಿ ತಿಳಿಯುತ್ತದೆ, ಸಚಿವರ ಈ ತಾರತಮ್ಯ ನಡೆಯನ್ನು ಎಸ್‌ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಖಂಡಿಸಿದೆ.

ದಲಿತ ಅಂಗವಿಕಲ ರಾಮಚಂದ್ರ ನಾಯಕ್ ಎಂಬವರು ಕೊಳವೆ ಬಾವಿಗಾಗಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿ ಅದರ ಶಿಫಾರಸ್ಸಿಗಾಗಿ ಶಾಸಕ ಹಾಗೂ ಸಚಿವ ಅಂಗಾರರ ಸಹಿಗಾಗಿ ದಲಿತ ಸಂಘಟನೆಯ ಮುಖಂಡರೋರ್ವರ ಮೂಲಕ ಬಿಜೆಪಿ ಕಚೇರಿಯ ಕಾರ್ಯದರ್ಶಿಗೆ ಪೋನ್ ಮಾಡಿದ ಸಂದರ್ಭದಲ್ಲಿ ಅವರು ಅರ್ಜಿದಾರರು ಬಿಜೆಪಿ ಪಕ್ಷಕ್ಕೆ ಮತ ಹಾಕಿದವರಲ್ಲ ಹಾಗೂ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರು ಕೂಡ ಅವರಿಗೆ ಸೌಲತ್ತು ನೀಡುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಶಾಸಕರು ಸಹಿ ಹಾಕುವುದಿಲ್ಲ.ಈ ಬಗ್ಗೆ ಶಾಸಕರು ಕೂಡ ಹೇಳಿದ್ದಾರೆಂದು ಬಿಜೆಪಿ ಕಚೇರಿ ಕಾರ್ಯದರ್ಶಿ ಹೇಳಿರುವುದು ಇದೀಗ ವೈರಲ್ ಆಗಿದೆ.

ಯಾವುದೇ ಫಲಾನುಭವಿಗಳು ಬಿಜೆಪಿ ಪಕ್ಷದ ನಿಧಿಯಿಂದ ಸಹಾಯವನ್ನು ಅಪೇಕ್ಷಿಸಿ ಅರ್ಜಿ ಸಲ್ಲಿಸುವುದಲ್ಲ ಬದಲಾಗಿ
ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸರ್ಕಾರಿ ಕಛೇರಿಗಳಾದ ಗ್ರಾ.ಪಂ ತಾಲ್ಲೂಕು ಪಂಚಾಯತ್, ತಹಶೀಲ್ದಾರರ ಕಚೇರಿ ಸೇರಿದಂತೆ ಮುಂತಾದ ಸರ್ಕಾರಿ ಕಚೇರಿಗಳಲ್ಲಿ ಅರ್ಜಿ ‌ಸಲ್ಲಿಸುವುದು ನಿಯಮವಾಗಿದೆ. ಆದರೆ ಬಿಜೆಪಿ ಶಾಸಕರು ಹಾಗೂ ಸಚಿವರುಗಳು ಸರ್ಕಾರಿ ಸೌಲಭ್ಯಕ್ಕಾಗಿ ಬಿಜೆಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕೆಂಬ ಅನಧಿಕೃತ ಕಾನೂನುಗಳನ್ನು ಜನರ ಮೇಲೆ ಹೇರಿರುವುದು ಇದು ಯಾವ ‌ರೀತಿಯ ಪ್ರಜಾಪ್ರಭುತ್ವ ಆಡಳಿತ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ತೆರಿಗೆ ಪಾವತಿಸುವುದು ಕೇವಲ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಮಾತ್ರವಲ್ಲ,ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ತೆರಿಗೆ ಪಾವತಿ ಮಾಡುತ್ತಾನೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪ್ರತಿಯೋರ್ವರಿಗು ಹಕ್ಕಿದೆ,ಅದನ್ನು ತಮ್ಮ ಪಕ್ಷಕ್ಕೆ ಮತ ನೀಡಿಲ್ಲ ಎಂಬ ಕಾರಣ ಇಟ್ಟುಕೊಂಡು ನಿರಾಕರಿಸುವುದು ಸಂವಿಧಾನ ವಿರೋಧಿ ನಡೆಯಾಗಿದೆ.
ಬಿಜೆಪಿ ಸರ್ಕಾರಕ್ಕೆ ಬಿಜೆಪಿ ಕಾರ್ಯಕರ್ತರು ಹಾಗೂ ಮತದಾರರು ಹೊರತುಪಡಿಸಿದ ಬೇರೆ ಯಾರು ತೆರಿಗೆ ಪಾವತಿಸಬೇಡಿ ಎಂದು ಹೇಳುವ ಧೈರ್ಯ ಸಚಿವ ಅಂಗಾರರಿಗೆ ಅಥವಾ ಬೇರಾವುದಾದರು ಸರ್ಕಾರದ ಶಾಸಕ,ಸಚಿವರಿಗೆ ಇದೆಯಾ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದ ಖಜಾನೆಯನ್ನು ಭ್ರಷ್ಟಾಚಾರ ನಡೆಸಿ ದೋಚಿರುವ ಬಿಜೆಪಿ ನಾಯಕರುಗಳಿಗೆ ಜನಸಾಮಾನ್ಯ ದಲಿತ ಅಂಗವಿಕಲ ವ್ಯಕ್ತಿಗೆ ಸರ್ಕಾರಿ ಸೌಲಭ್ಯವನ್ನು ನೀಡಲು ಯೋಗ್ಯತೆ ಇಲ್ಲದೇ ಹೋದದ್ದು ಈ ರಾಜ್ಯದ ದುರಂತವಾಗಿದೆ. ಕೂಡಲೇ ರಾಜ್ಯ ಸರ್ಕಾರವೂ ದಲಿತ ಅಂಗವಿಕಲ ಅರ್ಜಿದಾರರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಎಸ್‌ ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version